Publish Date: Sat, 22 Apr 2023 (09:10 IST)
Updated Date: Sat, 22 Apr 2023 (09:12 IST)
ಬೆಂಗಳೂರು: ಕಿಚ್ಚ ಸುದೀಪ್ ಬಹಳ ದಿನಗಳಿಂದ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ ಮೂರು ಕತೆಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದರು.
ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇದರ ನಡುವೆಯೇ ಕಿಚ್ಚ ಮೂರು ಕತೆಗಳನ್ನು ಫೈನಲ್ ಮಾಡಿದ್ದು, ಸದ್ಯದಲ್ಲೇ ಘೋಷಣೆ ಮಾಡುವೆ ಎಂದಿದ್ದರು.
ಈ ಮೂರು ಸಿನಿಮಾಗಳ ಪೈಕಿ ಒಂದು ಸಿನಿಮಾ ನಿರ್ದೇಶನ ಮಾಡುವುದು ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಎನ್ನುವುದು ಪಕ್ಕಾ ಆಗಿದೆ. ಅದರ ಜೊತೆಗೆ ನಂದಕಿಶೋರ್ ಜೊತೆಗೆ ಸುದೀಪ್ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಇದರ ಜೊತೆಗೆ ಮೂರನೇ ಸಿನಿಮಾ ಬಗ್ಗೆ ಮತ್ತೊಂದು ಮಾತು ಕೇಳಿಬರುತ್ತಿದೆ. ತಮಿಳು ನಿರ್ದೇಶಕ ಚರಣ್ ಸುದೀಪ್ ಗಾಗಿ ಮೂರನೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಸದ್ಯಕ್ಕೆ ಎಲ್ಲವನ್ನೂ ಕಿಚ್ಚ ಎಲೆಕ್ಷನ್ ಭರಾಟೆ ಮುಗಿದ ಮೇಲೆ ಘೋಷಣೆ ಮಾಡುವ ನಿರೀಕ್ಷೆಯಿದೆ.