Publish Date: Fri, 21 Apr 2023 (17:26 IST)
Updated Date: Fri, 21 Apr 2023 (17:36 IST)
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಬಂದ ಕೇಸ್ಗೆ ಸಂಬಂಧಿಸಿದಂತೆ ಕೆಲಸ ಬಿಟ್ಟಿದ್ದ ಸುದೀಪ್ ಕಾರು ಚಾಲಕನನ್ನ ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ಈಗಾಗಲೇ 2 ಬಾರಿ ಸಿಸಿಬಿ ನೊಟೀಸ್ ನೀಡಿ ಕಾರು ಚಾಲಕನನ್ನು ವಿಚಾರಣೆ ನಡೆಸಿದ್ರೂ ಸಹ ಯಾವುದೇ ಮಾಹಿತಿ ದೊರೆತಿಲ್ಲ. ದೂರು ಕೊಟ್ಟ ನಿರ್ಮಾಪಕ ಜಾಕ್ ಮಂಜು ಸಿಸಿಬಿಗೆ ಯಾವುದೇ ಸಹಕಾರ ನೀಡುತ್ತಿಲ್ಲ. ಈ ಹಿಂದೆ ಮಾಧ್ಯಮದವರ ಮುಂದೆ ಆರೋಪಿಗಳು ಯಾರು ಅಂತ ಗೊತ್ತು ಎಂದು ಜಾಕ್ ಮಂಜು ಹೇಳಿದ್ರು.. ನಂತರ ಜಾಕ್ ಮಂಜುಗೆ ಸಿಸಿಬಿಯವರು ನೋಟಿಸ್ ನೀಡಿ ವಿಚಾರಣೆ ನಡೆಸಿದರು. ಆದರೆ ಮಂಜು ಈವರೆಗೂ ಯಾವುದೇ ಹೆಸರುಗಳನ್ನು ಸಿಸಿಬಿಗೆ ಹೇಳಿಲ್ಲ.. ಸಿಸಿಬಿ ಕಾರನ್ನು ಪತ್ತೆ ಮಾಡಿ ಕಾರು ಚಾಲಕನನ್ನು ವಿಚಾರಣೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಬೆಳಕಿಗೆ ಬಂದಿದೆ. ಕಾರು ಸಿಕ್ಕಿದೆ, ಆರೋಪಿಗಳ ಫೋಟೋ ಸಿಕ್ಕಿದೆ. ಆದರೆ ಈವರೆಗೂ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗದ ಕಾರಣ ಆರೋಪಿಗಳ ಪತ್ತೆಗೆ ಸಿಸಿಬಿಯವರು ತಲೆಕೆಡಿಸಿಕೊಂಡಿದ್ದಾರೆ.