Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯ!

ಸ್ಯಾಂಡಲ್ ವುಡ್
ನವದೆಹಲಿ: ಭಾರತದ ಎಲ್ಲಾ ರಂಗದ ಸೆಲೆಬ್ರಿಟಿಗಳೂ ಟ್ವಿಟರ್ ನಲ್ಲಿ ಖಾತೆ ಹೊಂದಿದ್ದು, ಆ ಖಾತೆ ಅಧಿಕೃತ ಎಂದು ತಿಳಿಯಲು ಇದುವರೆಗೆ ಟ್ವಿಟರ್ ಕಡೆಯಿಂದ ಬ್ಲೂ ಟಿಕ್ ನೀಡಲಾಗುತ್ತಿತ್ತು.

ಆದರೆ ಈಗ ಎಲ್ಲಾ ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿದೆ! ಇದಕ್ಕೆ ಕಾರಣ ಟ್ವಿಟರ್ ನ ಹೊಸ ನಿಯಮ. ಎಲಾನ್ ಮಸ್ಕ್ ಟ್ವಿಟರ್ ಚುಕ್ಕಾಣಿ ಹಿಡಿದ ಮೇಲೆ ಹಲವು ಬದಲಾವಣೆ ಮಾಡುತ್ತಿದ್ದಾರೆ. ಅದರಲ್ಲಿ ಇದೂ ಒಂದು. ಇದ್ದಕ್ಕಿದ್ದಂತೆ ಎಲ್ಲಾ ಸೆಲೆಬ್ರಿಟಿಗಳ ಅಧಿಕೃತ ಖಾತೆಯಿಂದ ಬ್ಲೂ ಟಿಕ್ ತೆಗೆದುಹಾಕಲಾಗಿದೆ.

ಇನ್ನು ಮುಂದೆ ಬ್ಲೂ ಟಿಕ್ ಬೇಕಾದರೆ ಅದನ್ನು ಖರೀದಿ ಮಾಡಬೇಕು. ತಿಂಗಳಿಗೆ 900 ರೂ. ಅಥವಾ ವರ್ಷಕ್ಕೆ 9400 ರೂ. ನೀಡಿ ಬ್ಲೂ ಟಿಕ್ ಖರೀದಿ ಮಾಡಿದರೆ ಮಾತ್ರ ಖಾತೆಗೆ ಬ್ಲೂ ಟಿಕ್ ನೀಡಲು ಟ್ವಿಟರ್ ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿಗಾಗಿ ಮೂರು ತಿಂಗಳು ಬ್ರೇಕ್ ಪಡೆಯಲಿರುವ ರಾಮ್ ಚರಣ್