Publish Date: Fri, 21 Apr 2023 (07:10 IST)
Updated Date: Fri, 21 Apr 2023 (07:14 IST)
ಹೈದರಾಬಾದ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಮ್ ಚರಣ್ ತೇಜ-ಉಪಾಸನಾ ದಂಪತಿ ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೇ ತಿಂಗಳ ಅಂತ್ಯಕ್ಕೆ ಉಪಾಸನಾಗೆ ಹೆರಿಗೆಯಾಗುವ ನಿರೀಕ್ಷೆಯಿದೆ. ಹೀಗಾಗಿ ರಾಮ್ ಚರಣ್ ಆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಲು ಯೋಜನೆ ರೂಪಿಸಿದ್ದಾರೆ.
ಈ ಕಾರಣಕ್ಕೆ ಮೂರು ತಿಂಗಳು ಪತ್ನಿ, ಮಗುವಿನ ಜೊತೆಗಿರಲು ಶೂಟಿಂಗ್ ನಿಂದ ರಜೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಇದೀಗ ಆರ್ ಸಿ15 ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಗುವಾದ ಬಳಿಕ ಕೆಲವು ದಿನ ತಂದೆಯಾಗಿ ಕರ್ತವ್ಯ ನಿರ್ವಹಿಸಲು ರಾಮ್ ಚರಣ್ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ.