Publish Date: Fri, 14 Apr 2023 (16:42 IST)
Updated Date: Fri, 14 Apr 2023 (16:47 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಸೆಲ್ಫೀ ಪ್ರಕಟಿಸಿರುತ್ತಿರುತ್ತಾರೆ. ಆದರೆ ಈ ಬಾರಿ ಅವರು ಪ್ರಕಟಿಸಿದ ಸೆಲ್ಫೀ ನೋಡಿ ಅಭಿಮಾನಿಯೊಬ್ಬ ವಿಶೇಷ ಕಾಮೆಂಟ್ ಮಾಡಿದ್ದಾನೆ.
ರಶ್ಮಿಕಾ ತಮ್ಮ ಮುಖದ ಕ್ಲೋಸಪ್ ಸೆಲ್ಫೀಯೊಂದನ್ನು ಪ್ರಕಟಿಸಿದ್ದರು. ಇದನ್ನು ಗಮನಿಸಿದ ಹದ್ದಿನಗಣ್ಣಿನ ಅಭಿಮಾನಿಯೊಬ್ಬ ರಶ್ಮಿಕಾಗೆ ಗಡ್ಡ ಚಿಗುರುತ್ತಿದೆ ಎಂದಿದ್ದಾನೆ.
ಹಿಂದಿಯಲ್ಲಿ ಕಾಮೆಂಟ್ ಮಾಡಿರುವ ಅಭಿಮಾನಿ, ಕೆನ್ನೆಯ ಬಳಿ ಗಡ್ಡ ಚಿಗುರುತ್ತಿದೆ. ಯಾರಾದರೂ ನೋಟಿಸ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಅಭಿಮಾನಿಯ ಈ ಕಾಮೆಂಟ್ ವೈರಲ್ ಆಗಿದೆ.