ಬೆಂಗಳೂರು: ಕಿಚ್ಚ ಸುದೀಪ್ ದಂಪತಿ ಮತ್ತು ಮಲಯಾಳಂ ಸೂಪರ್ ಸ್ಟಾರ್ ನಟಿ ಮಂಜು ವಾರಿಯರ್ ಸ್ನೇಹ ಸಂಬಂಧ ಇತ್ತೀಚೆಗಷ್ಟೇ ಎಲ್ಲರಿಗೂ ಗೊತ್ತಾಗಿದೆ. ಇದೀಗ ಸುದೀಪ್ ತಮ್ಮ ಪತ್ನಿಗಾಗಿ ಮಂಜು ವಾರಿಯರ್ ಪಟ್ಟ ಕಷ್ಟವನ್ನು ವಿವರಿಸಿದ್ದಾರೆ.
ಸುದೀಪ್ ಪತ್ನಿ ಪ್ರಿಯಾ ಬರ್ತ್ ಡೇಗಾಗಿ ಅಭಿಮಾನಿಗಳು ಕಾಮನ್ ಡಿಪಿಯೊಂದನ್ನು ಮಂಜುವಾರಿಯರ್ ಕೈಯಲ್ಲಿ ರಿಲೀಸ್ ಮಾಡಿಸಿದ್ದಾರೆ. ಆದರೆ ಈ ಕಾಮನ್ ಡಿಪಿ ರಿಲೀಸ್ ಮಾಡಲು ಮಂಜು ವಾರಿಯರ್ ನೆಟ್ ವರ್ಕ್ ಇರುವ ಪ್ರದೇಶಕ್ಕೆ ಬರಲು ಕಷ್ಟಪಟ್ಟಿದ್ದಾರಂತೆ. ನೀವು ಪ್ರಿಯಾಳ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಿದಿರಿ ಎಂದು ಸುದೀಪ್ ಟ್ವಿಟರ್ ಮೂಲಕ ಮಂಜು ವಾರಿಯರ್ ಗೆ ಧನ್ಯವಾದ ಸಲ್ಲಿಸಿದ್ದಾರೆ.