Daily Horoscope

Select Your Language

Notifications

webdunia
webdunia
webdunia
webdunia

ರಾಜಸ್ಥಾನ್ ರಾಯಲ್ಸ್ ನಿಂದ ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್

Kiccha Sudeep
Photo Courtesy: Twitter
ಬೆಂಗಳೂರು: ಐಪಿಎಲ್ ನ  ರಾಜಸ್ಥಾನ್ ರಾಯಲ್ಸ್ ತಂಡದಿಂದ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಇದಕ್ಕೆ ಕಿಚ್ಚನ ಕಡೆಯಿಂದ ಧನ್ಯವಾದ ಸಲ್ಲಿಕೆಯಾಗಿದೆ.

ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗರ ಜೊತೆ ಕಿಚ್ಚ ಸುದೀಪ್ ಗೆ ವಿಶೇಷ ಸ್ನೇಹ ಸಂಬಂಧವಿದೆ. ಜೋಸ್ ಬಟ್ಲರ್ ಜೊತೆ ಆತ್ಮೀಯತೆಯಿದೆ. ಈ ಮೊದಲು ಜೋಸ್ ಬಟ್ಲರ್ ಕಡೆಯಿಂದ ಕಿಚ್ಚ ಸುದೀಪ್ ಗೆ ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ಸಿಕ್ಕಿತ್ತು.

ಇದಕ್ಕೆ ಮೊದಲೂ ಸುದೀಪ್ ಗೆ ಉಡುಗೊರೆ ಸಿಕ್ಕಿತ್ತು. ಅದರ ಬಗ್ಗೆ ಅವರು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದರು. ಅದೇನು ಸಂಬಂಧವೋ ನನಗೆ ಗೊತ್ತಿಲ್ಲ. ರಾಜಸ್ಥಾನ್ ತಂಡ ನನಗೆ ಪ್ರತೀ ಬಾರಿಯೂ ಉಡುಗೊರೆ ಕಳುಹಿಸುತ್ತದೆ. ನಾನು ಇದಕ್ಕೆ ಆಭಾರಿಯಾಗಿದ್ದೇನೆ ಎಂದು ಕಿಚ್ಚ ಹೇಳಿಕೊಂಡಿದ್ದರು.

ಇದೀಗ ಈ ಬಾರಿ ಸುದೀಪ್ ಗೆ ರಾಜಸ್ಥಾನ್ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದೆ. ಈ ಪಿಂಕ್ ಜೆರ್ಸಿಯಲ್ಲಿ 7 ಸಂಖ್ಯೆ ಮತ್ತು ಸುದೀಪ್ ಎಂದು ಬರೆಯಲಾಗಿದೆ. ಈ ಉಡುಗೊರೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕಿಚ್ಚ ‘ಪ್ರತೀ ವರ್ಷವೂ ನನಗೆ ಈ ರೀತಿ ಉಡುಗೊರೆ ನೀಡಿ ಪ್ರೀತಿ ತೋರುತ್ತಿರುವ ರಾಜಸ್ಥಾನ್ ರಾಯಲ್ಸ್ ಗೆ ಧನ್ಯವಾದಗಳು. ತಂಡದ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆಗಳು’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಸಾವಿಗೂ ಕೊವಿಶೀಲ್ಡ್ ಕಾರಣ: ಹಳೇ ಟ್ವೀಟ್ ವೈರಲ್