Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಸಾವಿಗೂ ಕೊವಿಶೀಲ್ಡ್ ಕಾರಣ: ಹಳೇ ಟ್ವೀಟ್ ವೈರಲ್

Puneeth Rajkumar

Krishnaveni K

ಬೆಂಗಳೂರು , ಶುಕ್ರವಾರ, 3 ಮೇ 2024 (11:48 IST)
Photo Courtesy: Twitter
ಬೆಂಗಳೂರು: ಇತ್ತೀಚೆಗಷ್ಟೇ ಕೊವಿಶೀಲ್ಡ್ ಲಸಿಕೆಯಿಂದ ರಕ್ತಹೆಪ್ಪುಗಟ್ಟುವುದು, ಹೃದಯಸ್ತಂಬನದಂತಹ ಅಡ್ಡಪರಿಣಾಮಗಳಾಗುತ್ತವೆ ಎಂದು ತಯಾರಿಕಾ ಕಂಪನಿಯೇ ಒಪ್ಪಿಕೊಂಡಿದ್ದ ಸುದ್ದಿ ವೈರಲ್ ಆಗಿತ್ತು.

ಆಸ್ಟ್ರಾಜೆನೆಕಾ ಎಂಬ ಬ್ರಿಟನ್ ಕಂಪನಿ ಕೊರೋನಾ ವ್ಯಾಕ್ಸಿನ್ ನಿಂದ ಅಡ್ಡಪರಿಣಾಮಗಳಿವೆ ಎಂದು ಒಪ್ಪಿಕೊಂಡಿತ್ತು. ಇದೇ ಕಂಪನಿಯ ವ್ಯಾಕ್ಸಿನ್ ನನ್ನೇ ಭಾರತದಲ್ಲಿ ಕೊವಿಶೀಲ್ಡ್ ಹೆಸರಿನಲ್ಲಿ ನೀಡಲಾಗುತ್ತಿತ್ತು. ಇದೀಗ ಕೊರೋನಾ ಬಳಿಕ ಕೆಲವರಲ್ಲಿ ಕಂಡುಬರುತ್ತಿರುವ ದಿಡೀರ್ ಹೃದಯಸ್ತಂಬನ, ಸಾವು ಪ್ರಕರಣಗಳಿಗೆ ಈ ಲಸಿಕೆಯೇ ಕಾರಣವಾಗಿರಬಹುದು ಎಂಬ ಅಪವಾದ ಕೇಳಿಬಂದಿದೆ.

ವಿಶೇಷವೆಂದರೆ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಕೂಡಾ ಕೊರೋನಾಗೆ ಕೊವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು. ಹೀಗಾಗಿಯೇ ಅವರಿಗೆ ಹೃದಯಸ್ತಂಬನವಾಗಿರಬಹುದು ಎಂದು ಈಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂದು ಪುನೀತ್ ಕೊವಿಶೀಲ್ಡ್ ಪಡೆದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿದ್ದಾಗ ಅಭಿಮಾನಿಯೊಬ್ಬರು ಇದು 45 ವರ್ಷ ಮೇಲ್ಪಟ್ಟವರಿಗೆ ಸುರಕ್ಷಿತವಲ್ಲ ಸರ್. ಇದನ್ನು ತೆಗೆದುಕೊಳ್ಳಬೇಡಿ ಎಂದು ಪ್ರತಿಕ್ರಿಯಿಸಿದ್ದರು. ಆ ಟ್ವೀಟ್ ಈಗ  ವೈರಲ್ ಆಗಿದೆ. ಪುನೀತ್ ದಿಡೀರ್ ಸಾವಿಗೆ ಈ ವ್ಯಾಕ್ಸಿನ್ ತೆಗೆದುಕೊಂಡಿದ್ದೇ ಕಾರಣವಾಗಿರಬಹುದು ಎಂದು ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಸಿನಿಮಾ ತಂಡದವರಿಗೆ ಕಾರು ಗಿಫ್ಟ್ ಮಾಡಿದ ರಾಕ್ ಲೈನ್ ವೆಂಕಟೇಶ್