Select Your Language

Notifications

webdunia
webdunia
webdunia
webdunia

ಕೊವಿಶೀಲ್ಡ್ ನಿಂದ ಅಡ್ಡಪರಿಣಾಮಗಳಿವೆ ಎಂದು ಒಪ್ಪಿಕೊಂಡ ಕಂಪನಿ

Covid vaccine

Krishnaveni K

ನವದೆಹಲಿ , ಮಂಗಳವಾರ, 30 ಏಪ್ರಿಲ್ 2024 (10:24 IST)
Photo Courtesy: Twitter
ನವದೆಹಲಿ: ಕೊರೋನಾ ರೋಗಕ್ಕೆ ಲಸಿಕೆಯಾಗಿ ಬಳಸಲಾಗುತ್ತಿದ್ದ ಕೋವಿಶೀಲ್ಡ್ ನಿಂದ ಅಡ್ಡಪರಿಣಾಮಗಳಿವೆ ಎಂಬುದನ್ನು ಈಗ ಸ್ವತಃ ತಯಾರಕ ಕಂಪನಿಯೇ ಒಪ್ಪಿಕೊಂಡಿದೆ.

ಕೊರೋನಾ ಔಷಧಿಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಇದನ್ನು ಒಪ್ಪಿಕೊಂಡಿದೆ. ಆಸ್ಟ್ರೆಜೆನೆಕಾ ಲಸಿಕೆ ಪಡೆದ ಬಳಿಕ ಮೆದುಳು, ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ ಲೆಟ್ ಕಡಿಮೆಯಾಗುವುದು ಇತ್ಯಾದಿ ಅಡ್ಡಪರಿಣಾಮಗಳು ಬರಬಹುದು ಎಂದು ಕಂಪನಿಯೇ ಒಪ್ಪಿಕೊಂಡಿದೆ.

ಬ್ರಿಟನ್ ನಿವಾಸಿ ಜೆಮಿ ಸ್ಕಾಟ್ ಕೊವಿಶೀಲ್ಡ್ ಔಷಧಿಯಿಂದ ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವುದು ಎಂದು ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ಹೀಗಾಗುವುದು ಇದೆ ಎಂದು ಕಂಪನಿಯೇ ಒಪ್ಪಿಕೊಂಡಿದೆ. ಇದರ ಬಗ್ಗೆ ವಿಸ್ತ್ರೃತ ಅಧ್ಯಯನದ ಅಗತ್ಯವಿದೆ ಎಂದಿದೆ.

ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದಲ್ಲಿ ಸೀರಂ ಸಂಸ್ಥೆ ಕೊವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿತ್ತು. ಹೀಗಾಗಿ ಲಂಡನ್ ನಲ್ಲಿ ನಡೆದ ಈ ಪ್ರಕರಣ ಭಾರತದಲ್ಲೂ ಮಹತ್ವ ಪಡೆದುಕೊಂಡಿದೆ. ಕೊರೋನಾ ವ್ಯಾಕ್ಸಿನ್ ನಿಂದ ಅಡ್ಡಪರಿಣಾಮಗಳಿವೆ ಎಂದು ಹಲವರು ಪ್ರತಿಪಾದಿಸುತ್ತಿದ್ದರೂ ಕಂಪನಿಗಳು ಇದನ್ನು ಅಲ್ಲಗಳೆಯುತ್ತಲೇ ಬಂದಿದ್ದವು.

ರಕ್ತದ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಹೃದಯ ಸ್ತಂಭನವಾಗುವ ಸಾಧ‍್ಯತೆ ಹೆಚ್ಚು. ಕನ್ನಡ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಕೊರೋನಾ ಬಳಿಕ ಹಲವರು ಆರೋಗ್ಯವಂತರಾಗಿದ್ದರೂ ದಿಡೀರ್ ಆಗಿ ಹೃದಯಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಇದೆಲ್ಲಾ ಕೊರೋನಾ ವ್ಯಾಕ್ಸಿನ್ ಲಸಿಕೆಯ ಅಡ್ಡಪರಿಣಾಮಗಳು ಎಂದು ಕೆಲವರು ವಾದಿಸುತ್ತಿದ್ದರು. ಅದೀಗ ನಿಜವಾದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ನಲ್ಲಿ ಮರೆಯಾದ ನೇಹಾ ಹತ್ಯೆ ಪ್ರಕರಣ