Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ 24 ಹೊಸ ಕೊರೋನಾ ಕೇಸ್​ ಪತ್ತೆ

ರಾಜ್ಯದಲ್ಲಿ 24 ಹೊಸ ಕೊರೋನಾ ಕೇಸ್​ ಪತ್ತೆ
bangalore , ಶುಕ್ರವಾರ, 22 ಡಿಸೆಂಬರ್ 2023 (14:00 IST)
ಕಳೆದ 24 ಘಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 24 ಕೊರೋನಾ ಕೇಸ್​ಗಳು ಪತ್ತೆಯಾಗಿವೆ.. ಬೆಂಗಳೂರಿನಲ್ಲಿ 23 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.. ದಕ್ಷಿಣ ಕನ್ನಡದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.. 24 ಗಂಟೆಯಲ್ಲಿ 2 ಸಾವಿರದ 263 ಜನರಿಗೆ ಕೊರೋನಾ ಟೆಸ್ಟ್​ ಮಾಡಲಾಗಿದೆ.. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.. 11 ಜನ ಕೊರೋನಾದಿಂದ ಗುಣಮುಖರಾಗಿದ್ದು, ಸಾವು ವರದಿಯಾಗಿಲ್ಲ.
 
ಸೋಂಕಿತರ ಪೈಕಿ 9 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಇಂದು ಇಬ್ಬರು ಕೊರೋನಾ ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ.. ರಾಜ್ಯದ ಕೊರೋನಾ ಪಾಸಿಟಿವಿಟಿ ರೇಟ್ 1.06 ಪರ್ಸೆಂಟ್ ಕ್ಕೆ ಏರಿಕೆಯಾಗಿದೆ.. ಹೋಮ್ ಐಸೊಲೇಷನ್​ನಲ್ಲಿ 85 ಸೋಂಕಿತರಿದ್ದು, 20 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕಂಗಾಲಾದ ಅಧಿಕಾರಿ ಮಾಡಿದ್ದೇನು?