Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಗೆ ಮಹತ್ವದ ಪಂದ್ಯ

MI vs KKR

Krishnaveni K

ಮುಂಬೈ , ಶುಕ್ರವಾರ, 3 ಮೇ 2024 (10:40 IST)
ಮುಂಬೈ: ಐಪಿಎಲ್ 2024 ಮಹತ್ವದ ಘಟ್ಟಕ್ಕೆ ತಲುಪಿದ್ದು, ಇಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ ಮಹತ್ವದ ಪಂದ್ಯವಾಡಲಿದೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ಇದುವರೆಗೆ ಆಡಿದ 9 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿದ್ದು 12 ಅಂಕಗಳನ್ನು ಸಂಪಾದಿಸಿದೆ. ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿರುವ ಕೆಕೆಆರ್ ಗೆ ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಅಂತರದ ಗೆಲುವು ಸಾಧಿಸಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್ ಬೌಲಿಂಗ್ ಉತ್ತಮವಾಗಿತ್ತು. ಜೊತೆಗೆ ಬ್ಯಾಟಿಂಗ್ ನಲ್ಲೂ ಫಿಲ್ ಸಾಲ್ಟ್, ನಾಯಕ ಶ್ರೇಯಸ್ ಅಯ್ಯರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

ಇನ್ನೊಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋತಿದೆ. ಆಡಿದ 10 ಪಂದ್ಯಗಳಲ್ಲಿ ಕೇವಲ 3 ಗೆಲುವು ಕಂಡಿರುವ ಮುಂಬೈಗೆ ಪ್ಲೇ ಆಫ್ ಸ್ಥಾನ ಕನಸಾಗಿದೆ. ಆದರೆ ತವರಿನ ಪ್ರೇಕ್ಷಕರ ಎದುರು ಹಾರ್ದಿಕ್ ಪಾಂಡ್ಯ ಪಡೆ ಉತ್ತಮ ಪ್ರದರ್ಶನ ನೀಡಿ ಮಾನ ಕಾಪಾಡಿಕೊಳ್ಳಬೇಕಾಗಿದೆ. ಕಳೆದ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಮುಂಬೈಗೆ ಕೈಕೊಟ್ಟಿತ್ತು. ಇದೀಗ ಕೊನೆಯ ಹಂತದಲ್ಲಿ ಗೆದ್ದು ತವರಿನ ಪ್ರೇಕ್ಷಕರ ರಂಜಿಸಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಕೊನೆಯ ಓವರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆ ಥ್ರಿಲ್ಲಿಂಗ್ ಗೆಲುವು