Publish Date: Thu, 18 Mar 2021 (10:49 IST)
Updated Date: Thu, 18 Mar 2021 (10:51 IST)
ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಂತಹದ್ದೇ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.
ಹುಬ್ಬಳ್ಳಿಯ ಹರಿಜನ ಅನುದಾನಿತ ಹೆಣ್ಣು ಮಕ್ಕಳ ಶಾಲೆಗೆ ನೆರವಾಗುವ ಮೂಲಕ ಕಣ್ಣೀರು ಹಾಕುತ್ತಿದ್ದ ಹೆಣ್ಣು ಮಕ್ಕಳಿಗೆ ಆಪತ್ಬಾಂಧವರಾಗಿದ್ದಾರೆ. ಶಾಲೆಯಿದ್ದ ಕಟ್ಟಡ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದರು.
ಈ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಿಚ್ಚ ಚ್ಯಾರಿಟೇಬಲ್ ಸೊಸೈಟಿ ಸದಸ್ಯರು ಕಿಚ್ಚನ ಪರವಾಗಿ ಸಹಾಯ ಮಾಡಿದ್ದಾರೆ. ಸ್ವತಃ ಕಿಚ್ಚ ಸುದೀಪ್ ವಿಡಿಯೋ ಕರೆ ಮಾಡಿ ಆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪರಿಹಾರದ ಭರವಸೆ ಕೊಟ್ಟಿದ್ದಾರೆ.