Select Your Language

Notifications

webdunia
webdunia
webdunia
webdunia

ಅಪಘಾತಕ್ಕೀಡಾದ ಸಂಚಾರಿ ವಿಜಯ್ ಗೆ ಕಿಚ್ಚ ಸುದೀಪ್ ನೆರವು

ಅಪಘಾತಕ್ಕೀಡಾದ ಸಂಚಾರಿ ವಿಜಯ್ ಗೆ ಕಿಚ್ಚ ಸುದೀಪ್ ನೆರವು
ಬೆಂಗಳೂರು , ಸೋಮವಾರ, 14 ಜೂನ್ 2021 (08:53 IST)
ಬೆಂಗಳೂರು: ಸ್ನೇಹಿತನ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತವಾಗಿ ತೀವ್ರ ಪೆಟ್ಟು ಮಾಡಿಕೊಂಡಿರುವ ನಟ ಸಂಚಾರಿ ವಿಜಯ್ ಸಹಾಯಕ್ಕೆ ಕಿಚ್ಚ ಸುದೀಪ್ ಧಾವಿಸಿದ್ದಾರೆ.


ಈ ಬಗ್ಗೆ ನಿರ್ಮಾಪಕ, ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಚಾರಿ ವಿಜಯ್ ಕೋಮಾ ಸ್ಥಿತಿಗೆ ತಲುಪಿದ್ದರು. ಅವರ ಸ್ನೇಹಿತರು, ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ವಿಷಮ ಸ್ಥಿತಿಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಲು ಸಂಚಾರಿ ವಿಜಯ್ ಗೆ ಕಿಚ್ಚ ಸುದೀಪ್ ನೆರವಾಗಿದ್ದಾರಂತೆ. ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ