Webdunia - Bharat's app for daily news and videos

Install App

ಈ ಬಾರಿಯ ಬಿಗ್‌ಬಾಸ್‌ ಶೋನಿಂದ ಹಿಂದೆ ಸರಿದ್ರಾ ಕಿಚ್ಚ ಸುದೀಪ್

Sampriya
ಶನಿವಾರ, 10 ಆಗಸ್ಟ್ 2024 (17:06 IST)
Photo Courtesy X
ಬೆಂಗಳೂರು: ತಮಿಳು ಬಿಗ್‌ ಬಾಸ್‌ ಶೋನ ಈ ಆವೃತ್ತಿಯಿಂದ ಕಮಲ್ ಹಾಸನ್ ಅವರು ಹೊರನಡೆದ ಬೆನ್ನಲ್ಲೇ, ಕನ್ನಡದ ಬಿಗ್‌ ಬಾಸ್‌ ಶೋನಿಂದ ಕಿಚ್ಚ ಸುದೀಪ್ ಹೊರ ನಡೆಯುತ್ತಾರೆಂಬ ಗುಸು ಗುಸು ಶುರುವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಜೋರಾಗಿ ಸದ್ದು ಮಾಡುತ್ತಿದ್ದು, ಇದರಿಂದ ಕನ್ನಡ ಬಿಗ್‌ಬಾಸ್ ಅಭಿಮಾನಿಗಳು ಬೇಜಾರಾಗಿದ್ದಾರೆ. ಇನ್ನೂ ಒಂದುವೇಳೆ ಸುದೀಪ್ ಅವರು ಈ ಸ್ಥಾನದಿಂದ ಹೊರನಡೆದರೆ ಇದನ್ನು ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ ಅಥವಾ ನಟ ರಮೇಶ್ ಅರವಿಂದ್ ನಡೆಸಲಿದ್ದಾರೆ ಎಂಬ ವಿಚಾರವಿದೆ.  ಕಲರ್ಸ್ ಕನ್ನಡ ಮೂಲಗಳ ಪ್ರಕಾರ ಇದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದಿದೆ. ಆದರೆ ಇದುವರೆಗೂ ಈ ಬಗ್ಗೆ ಸ್ಪಷ್ಟಣೆ ಸಿಕ್ಕಿಲ್ಲ.

ನಟ ಸುದೀಪ್ ಅವರು ಯಶಸ್ವಿಯಾಗಿ 10 ಕನ್ನಡ ಬಿಗ್‌ಬಾಸ್ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇನ್ನೂ ಸುದೀಪ್ ಅವರ ಸ್ಟೈಲಿಶ್ ಲುಕ್‌ ಅನ್ನು ವೀಕೆಂಡ್‌ನಲ್ಲಿ ನೋಡಲು, ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಳ್ಳುವ ಖಡಕ್ ಮಾತನ್ನು ಕೇಳಲು ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಇನ್ನೂ ಮೂಲಗಳ ಪ್ರಕಾರ ಸುದೀಪ್ ಅವರೇ ಈ ಸೀಸನ್‌ ಅನ್ನು ನಡೆಸಿಕೊಡುತ್ತಾರೆ. ಸುದೀಪ್ ಅವರ 'ಮ್ಯಾಕ್ಸ್' ಶೂಟಿಂಗ್ ಮುಗಿದಿದ್ದು. ಈ ಬಾರಿಯೂ ಅವರೇ ಯಶಸ್ವಿಯಾಗಿ ಬಿಗ್‌ಬಾಸ್ ಆವೃತ್ತಿಯನ್ನು ನಡೆಸಿಕೊಡುತ್ತಾರೆಂಬ ವಿಚಾರವು ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ನಟ ರಿಷಭ್ ಶೆಟ್ಟಿ ಅವರು ಸದ್ಯ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ರಿಯಾಲಿಟಿ ಶೋಗೆ ಬರುವ ಯೋಚನೆಯೂ ಅವರಿಗಿಲ್ಲ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments