ಸೀಮಂತ ಶಾಸ್ತ್ರದಲ್ಲಿ ಗಂಡ ಡಾರ್ಲಿಂಗ್ ಕೃಷ್ಣ ಮಾಡಿದ ಕೆಲಸಕ್ಕೆ ಭಾವುಕರಾದ ಮಿಲನಾ ನಾಗರಾಜ್

Krishnaveni K
ಶನಿವಾರ, 10 ಆಗಸ್ಟ್ 2024 (13:47 IST)
Photo Credit: Facebook
ಬೆಂಗಳೂರು: ನಟಿ ಮಿಲನಾ ನಾಗರಾಜ್ ತುಂಬು ಗರ್ಭಿಣಿಯಾಗಿದ್ದು ಸದ್ಯದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದಕ್ಕೆ ಮೊದಲು ಡಾರ್ಲಿಂಗ್ ಕೃಷ್ಣಾ ತಮ್ಮ ಪತ್ನಿಯ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸೀಮಂತ ಶಾಸ್ತ್ರ ವಿಶೇಷವಾಗಿರುತ್ತದೆ. ತಾಯ್ತನದ ಖುಷಿಯನ್ನು ಸಂಭ್ರಮಿಸಲು ಸೀಮಂತ ಮಾಡಲಾಗುತ್ತದೆ. ಅದೇ ರೀತಿ ಮಿಲನಾ ನಾಗರಾಜ್ ಗೂ ಸೀಮಂತ ಶಾಸ್ತ್ರ ಮಾಡಲಾಗಿದೆ. ಇದರ ಬಳಿಕ ದಂಪತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಮಿಲನಾ ಸೀಮಂತ ಶಾಸ್ತ್ರ ಮನೆಯಲ್ಲಿಯೇ ಸರಳವಾಗಿ ಮಾಡಲಾಗಿದೆ. ಇದಕ್ಕೆ ಆಪ್ತರು ಮಾತ್ರ ಆಗಮಿಸಿದ್ದರು. ಈ ವೇಳೆ ಗಂಡ ಡಾರ್ಲಿಂಗ್ ಕೃಷ್ಣ ತಮ್ಮ ಪತ್ನಿಗೆ ಬಳೆ ತೊಡಿಸಿ, ಕುಂಕುಮವಿಟ್ಟು ಶಾಸ್ತ್ರ ನೆರವೇರಿಸಿದ್ದಾರೆ. ಈ ವೇಳೆ ಮಿಲನಾ ಭಾವುಕರಾಗಿದ್ದಾರೆ. ಈ ಕ್ಷಣಕ್ಕೆ ಬೆಲೆ ಕಟ್ಟಲಾಗದು ಎಂದು ಮಿಲನಾ ಹೇಳಿದ್ದಾರೆ.

ಡಾರ್ಲಿಂಗ್ ಕೃಷ್ಣ ಬಳೆ ತೊಡಿಸುವಾಗ ಮಿಲನಾ ಕಣ್ಣಂಚಿನಲ್ಲೂ ನೀರು ಕಂಡುಬಂದಿತ್ತು. ಸೀಮಂತದ ಜೊತೆಗೆ ಗಂಡ-ಹೆಂಡತಿ ಸುಂದರ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಮಾರ್ಚ್ ನಲ್ಲಿ ಮಿಲನಾ-ಡಾರ್ಲಿಂಗ್ ಕೃಷ್ಣ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಮುಂದಿನ ತಿಂಗಳು ಮಿಲನಾ ಮಗುವಿಗೆ ಜನ್ಮ ನೀಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ
Show comments