Select Your Language

Notifications

webdunia
webdunia
webdunia
webdunia

69th Film Fare Award: 69 ನೇ ಫಿಲ್ಮ್ ಫೇರ್ ಅವಾರ್ಡ್: ಪ್ರಶಸ್ತಿ ವಿಜೇತ ಕನ್ನಡ ಸಿನಿಮಾದ ಕಂಪ್ಲೀಟ್ ಲಿಸ್ಟ್ ಇಲ್ಲಿದೆ

Film Fare Award

Krishnaveni K

ಹೈದರಾಬಾದ್ , ಸೋಮವಾರ, 5 ಆಗಸ್ಟ್ 2024 (12:35 IST)
ಹೈದರಾಬಾದ್: ಕಮರ್ ಫಿಲ್ಮ್ ಫ್ಯಾಕ್ಟರಿಯೊಂದಿಗೆ 69 ನೇ ಶೋಭಾ ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ 2024 ಪ್ರಶಸ್ತಿ ಸಮಾರಂಭವನ್ನು ಆಗಸ್ಟ್ 3 ರಂದು ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿರುವ ಜೆಆರ್ ಸಿ ಕನ್ವೆನ್ಷನ್ ನಲ್ಲಿ ಆಯೋಜಿಸಲಾಗಿತ್ತು.

ವರ್ಣರಂಜಿತ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಅತ್ಯುತ್ತಮ ಸಿನಿಮಾಗಳು, ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲ್ಲಾ ಚಿತ್ರೋದ್ಯಮದ ದಿಗ್ಗಜರು ಈ ವೇದಿಕೆಯಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು.

ದಸರಾ ಮತ್ತು ಪೊನ್ನಿಯಿನ್ ಸೆಲ್ವನ್- ಭಾಗ 2 ರಲ್ಲಿಯ ಅದ್ಭುತ ಅಭಿನಯಕ್ಕಾಗಿ ಕ್ರಮವಾಗಿ, ತೆಲುಗು ಮತ್ತು ತಮಿಳು ವಿಭಾಗಗಳಲ್ಲಿ ನಾನಿ ಮತ್ತು ವಿಕ್ರಮ್ ಅವರು ನಾಯಕ ನಟ ಪ್ರಶಸ್ತಿ ಪಡೆದರು. ಅದೇ ರೀತಿ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿನ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ಕನ್ನಡ ವಿಭಾಗದಲ್ಲಿ ಲೀಡಿಂಗ್‌ ರೋಲ್‌ (ಪುರುಷ)ಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ನನ್ಪಕಲ್ ನೆರತು ಮಾಯಕ್ಕಂ ಚಿತ್ರದಲ್ಲಿನ ಅಸಾಧಾರಣ ಅಭಿನಯಕ್ಕಾಗಿ ಮಮ್ಮುಟ್ಟಿ ಅವರು ಮಲಯಾಳಂ ವಿಭಾಗದ ಲೀಡಿಂಗ್‌ (ಪುರುಷ)ರೋಲ್‌ಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

ಈ ವರ್ಷದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಶ್ರೀನಾಥ್ (ಪ್ರಣಯರಾಜ) ಪಡೆದಿದ್ದಾರೆ. 300 ಕ್ಕೂ ಹೆಚ್ಚು ಚಿತ್ರಗಳ ಮೂಲಕ ಅವರು ತಮ್ಮ ಜೀವನದ 57 ವರ್ಷಗಳನ್ನು ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಮರ್ಪಿಸಿದ್ದಾರೆ. 70 ರ ದಶಕದಲ್ಲಿ ರೊಮ್ಯಾಂಟಿಕ್ ಚಲನಚಿತ್ರಗಳಲ್ಲಿ ಅವರ ಅದ್ಭುತ ಯಶಸ್ಸಿನ ಕಾರಣ, ಅವರು 'ಪ್ರಣಯರಾಜ' ಎಂಬ ಬಿರುದಿನ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಅವರು ತಮ್ಮ ಬಹುಮುಖ ನಟನೆ ಮತ್ತು ನಾಯಕತ್ವದ ಗುಣದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ, ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ, ದಕ್ಷಿಣ ಚಲನಚಿತ್ರೋದ್ಯಮವು ದಿವಂಗತ ರಾಮೋಜಿ ರಾವ್ ಅವರಿಗೆ ಗೌರವ ಸಲ್ಲಿಸಿತು. ಅವರ ದೃಷ್ಟಿ ಭಾರತೀಯ ಚಿತ್ರರಂಗದ ರಚನೆಯನ್ನು ರೂಪಿಸಿತು. ಅಲ್ಲದೇ ಅಸಂಖ್ಯಾತ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ತಂತ್ರಜ್ಞರಿಗೆ ಅವರ ಕನಸುಗಳಿಗೆ ಜೀವ ತುಂಬಲು ವೇದಿಕೆಯನ್ನು ಒದಗಿಸಿತು.

 
ತೆಲುಗಿನಲ್ಲಿ, ಬಲಗಮ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. ರಂಗ ಮಾರ್ತಾಂಡ ಚಿತ್ರದಲ್ಲಿನ ಮನಮುಟ್ಟುವ ಅಭಿನಯಕ್ಕಾಗಿ, ಪ್ರಕಾಶ್ ರಾಜ್, ವಿಮರ್ಶಕರ ವಿಭಾಗದ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಯನ್ನು ಪಡೆದುಕೊಂಡರು. ಮತ್ತು ಬೇಬಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ತೆಲುಗು ವಿಮರ್ಶಕರ ವಿಭಾಗದಲ್ಲಿ ವೈಷ್ಣವಿ ಚೈತನ್ಯ ಅವರಿಗೆ ಅತ್ಯುತ್ತಮ ನಟಿ (ಮಹಿಳಾ) ಪ್ರಶಸ್ತಿ ಲಭಿಸಿತು. ಇದಲ್ಲದೆ, ನಿರ್ದೇಶಕ ವೇಣು ಯೆಲ್ದಂಡಿ ಅವರು ಬಳಗಂ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ತಮಿಳು ಚಿತ್ರರಂಗದಲ್ಲಿ, ಚಿತ್ತಾ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಅದೇ ಚಿತ್ರಕ್ಕಾಗಿ ನಿರ್ದೇಶಕ ಎಸ್.ಯು. ಅರುಣ್ ಕುಮಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದರು. ಚಿತ್ತಾ ಚಿತ್ರದ ಅಭಿನಯಕ್ಕಾಗಿ ನಟ ಸಿದ್ಧಾರ್ಥ್ ಸೂರ್ಯನಾರಾಯಣ್ ವಿಮರ್ಶಕ ವಿಭಾಗದಲ್ಲಿ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಿದ್ಧಾರ್ಥ್ ಸೂರ್ಯನಾರಾಯಣ್ ಅವರು 18 ವರ್ಷಗಳ ನಂತರ ಈ ಪ್ರಶಸ್ತಿಯನ್ನು ಗೆದ್ದು ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸೃಷ್ಟಿಸಿದರು. ಅವರ ಅಭಿಮಾನಿಗಳ ಕೋರಿಕೆಯ ಮೇರೆಗೆ, ಅವರು ತಮ್ಮ ಚಲನಚಿತ್ರದ 'ಉನಕ್ಕು ತಾನು' ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಐಶ್ವರ್ಯಾ ರಾಜೇಶ್ ಮತ್ತು ಅಪರ್ಣಾ ದಾಸ್ ಅವರನ್ನು ಕ್ರಮವಾಗಿ ಫರ್ಹಾನಾ ಮತ್ತು ದಾದಾದಲ್ಲಿನ ಅದ್ಭುತ ಅಭಿನಯಕ್ಕಾಗಿ ವಿಮರ್ಶಕರ ವಿಭಾಗದಲ್ಲಿನ  ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯ ಮೂಲಕ ಗೌರವಿಸಲಾಯಿತು.

 
ಮಲಯಾಳಂ ಚಿತ್ರರಂಗದ ಭಾಗವಾಗಿ, ಕಾತಲ್ ದಿ ಕೋರ್‌ನಲ್ಲಿನ  ಅದ್ಬುತ ಅಭಿನಯಕ್ಕಾಗಿ ವಿಮರ್ಶಕರ ವಿಭಾಗದಲ್ಲಿ ಜ್ಯೋತಿಕಾ ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನು ಪಡೆದರು. ಇರಟ್ಟ ಚಿತ್ರದಲ್ಲಿನ ಜೋಜು ಜಾರ್ಜ್ ಅವರ ಅತ್ಯುತ್ತಮ ಅಭಿನಯವು ಅವರಿಗೆ ವಿಮರ್ಶಕರ ವಿಭಾಗದ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಯನ್ನು ತಂದುಕೊಟ್ಟಿತು. ಮಲಯಾಳಂನಲ್ಲಿ 2018 ಚಲನಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದೇ ಚಲನಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಜೂಡ್ ಆಂಥನಿ ಜೋಸೆಫ್ ಪಡೆದರು.

 
ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ ಹೇಮಂತ್ ಎಂ ರಾವ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಡೇರ್‌ಡೆವಿಲ್ ಮುಸ್ತಫಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತು. ಗಮನಾರ್ಹವಾಗಿ, ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಅಭಿನಯಕ್ಕಾಗಿ ರುಕ್ಮಿಣಿ ವಸಂತ್ ಅವರು ವಿಮರ್ಶಕ ವಿಭಾಗದ ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನು ಗಳಿಸಿದರು. ಬ್ಲಾಕ್‌ಬಸ್ಟರ್ ಚಲನಚಿತ್ರ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿನ ಮನಸೆಳೆಯುವ ಅಭಿನಯಕ್ಕಾಗಿ ಪೂರ್ಣಚಂದ್ರ ಮೈಸೂರು ಕನ್ನಡದ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಗೆ ಭಾಜನರಾದರು.

ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾ ಲಿಸ್ಟ್ ಇಲ್ಲಿದೆ:
ಅತ್ಯುತ್ತಮ ಸಿನಿಮಾ: ಡೇರ್ ಡೆವಿಲ್ ಮುಸ್ತಫಾ
ಅತ್ಯುತ್ತಮ ನಿರ್ದೇಶಕ: ಹೇಮಂತ ರಾವ್ (ಸಪ್ತಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೆ)
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಟಗರು ಪಲ್ಯ)
ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)
ಅತ್ಯುತ್ತಮ ಸಂಗೀತ ನಿರ್ದೇಶನ: ಚರಣ್ ರಾಜ್ (ಸಪ್ತಸಾಗರದಾಚೆ ಎಲ್ಲೊ)
ಅತ್ಯುತ್ತಮ ಸಾಹಿತ್ಯ: ಬಿಆರ್ ಲಕ್ಷ್ಮಣ ರಾವ್ (ಯಾವ ಚುಂಬಕ-ಚೌಕ ಬಾರ), ಡಾಲಿ ಧನಂಜಯ (ಸಂಬಂಧ ಅನ್ನೋದು-ಟಗರು ಪಲ್ಯ)
ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ ಓ ನದಿಯೆ ಸಪ್ತಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲು ಕಾಣ ಹೊರಟಿರೊ-ಸಪ್ತಸಾಗರದಾಚೆ ಎಲ್ಲೊ)
ವಿಮರ್ಶಕರ ಪ್ರಶಸ್ತಿ
ಅತ್ಯುತ್ತಮ ನಟಿ: ರುಕ್ಮಿಣಿ  ವಸಂತ್ (ಸಪ್ತಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟ: ಪೂರ್ಣಚಂದ್ರ ಮೈಸೂರು (ಆರ್ಕೆಸ್ಟ್ರಾ ಮೈಸೂರು)
ಅತ್ಯುತ್ತಮ ಸಿನಿಮಾ: ಪಿಂಕಿ ಎಲ್ಲಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೆ ಒಟಿಟಿಗೆ ಲಗ್ಗೆಯಿಟ್ಟ ಕಮಲ್ ಹಾಸನ್ ಅಭಿನಯದ ಇಂಡಿಯನ್ 2: ಇಲ್ಲಿದೆ ಸಂಪೂರ್ಣ ಮಾಹಿತಿ