ತಮಿಳುನಾಡು: ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ತಮಿಳು ಚಿತ್ರ 'ಇಂಡಿಯನ್ 2' ಅಂದುಕೊಂಡ ಹಾಗೇ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸದ್ದು ಮಾಡುವಲ್ಲಿ ವಿಫಲವಾಗಿದೆ. ಇದೀಗ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಇದೇ 9ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಜುಲೈ 12 ರಂದು ಬಿಡುಗಡೆಯಾದ ಈ ಸಿನಿಮಾ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಚಿತ್ರಮಂದಿಗಳಲ್ಲಿ ಸಿನಿಮಾ ಉತ್ತಮ ರೆಸ್ಪಾನ್ಸ್ ಬಾರದಿರುವ ಕಾರಣ ಇದೀಗ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿದೆ. ಈ ಸಂಬಂಧ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್ ಮತ್ತು ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಇಂಡಿಯನ್ 2' ಅನ್ನು ರೆಡ್ ಜೈಂಟ್ ಮೂವೀಸ್ ಸಹಯೋಗದೊಂದಿಗೆ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಹೆಚ್ಚಿನ OTT ನವೀಕರಣಗಳಿಗಾಗಿ ಟ್ಯೂನ್ ಮಾಡಿ.