Webdunia - Bharat's app for daily news and videos

Install App

ತರುಣ್ ಸುಧೀರ್-ಸೋನಾಲ್ ಮಾಂತೆರೊ ಮದುವೆ ಕಾರ್ಯಕ್ರಮ ಇಂದಿನಿಂದ ಶುರು

Krishnaveni K
ಶನಿವಾರ, 10 ಆಗಸ್ಟ್ 2024 (08:51 IST)
ಬೆಂಗಳೂರು: ಸ್ಯಾಂಡಲ್ ವುಡ್ ಜೋಡಿ ತರುಣ್ ಸುಧೀರ್ ಮತ್ತು ಸೋನಲ್ ಮಾಂತೆರೊ ವಿವಾಹ ಕಾರ್ಯಕ್ರಮಗಳು ಇಂದಿನಿಂದ ಶುರುವಾಗಲಿದೆ. ಇಂದು ಸಂಜೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ರಾಬರ್ಟ್ ಸಿನಿಮಾದಲ್ಲಿ ತರುಣ್ ನಿರ್ದೇಶಕರಾಗಿ ಕೆಲಸ ಮಾಡಿದ್ದರೆ ಅದೇ ಸಿನಿಮಾದಲ್ಲಿ ಸೋನಲ್ ಒಂದು ಪಾತ್ರ ಮಾಡಿದ್ದರು. ಈ ವೇಳೆ ಸಹ ನಟರು ಇವರಿಬ್ಬರನ್ನೂ ಒಳ್ಳೆಯ ಜೋಡಿಯಾಗಬಹುದು ಎಂದು ಎಲ್ಲರೂ ಕಿಚಾಯಿಸುತ್ತಿದ್ದರಂತೆ. ಕಳೆದ ವರ್ಷ ಇಬ್ಬರೂ ಯಾಕೆ ಎಲ್ಲರೂ ಹೇಳುವಂತೆ ತಾವು ಮದುವೆಯಾಗಬಾರದು ಎಂದು ಯೋಚಿಸಿ ಪರಸ್ಪರ ಮಾತುಕತೆ ನಡೆಸಿದರಂತೆ.

ಈ ವಿಚಾರಗಳನ್ನು ತರುಣ್ ಮತ್ತು ಸೋನಲ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇಂದು ಈ ಜೋಡಿ ತಮ್ಮ ಒಂದು ವರ್ಷದ ಪ್ರೀತಿ ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತುತ್ತಿದ್ದಾರೆ. ಇಂದು ಸಂಜೆ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಮೊದಲು ನಿನ್ನೆ ಹಳದಿ ಕಾರ್ಯಕ್ರಮ ನಡೆದಿದೆ. ತರುಣ್ ಮತ್ತು ಸೋನಲ್ ಸಿನಿ ಸ್ನೇಹಿತರು ಹಳದಿ ಕಾರ್ಯಕ್ರಮದಲ್ಲಿ ನವ ಜೋಡಿಯನ್ನು ಹಳದಿಯಲ್ಲಿ ತೋಯಿಸಿದ್ದಾರೆ.

ನಾಳೆ ಇಲ್ಲಿಯೇ ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ಸೋನಲ್ ಅವರ ಕ್ರಿಶ್ಚಿಯನ್ ಧರ್ಮದಂತೆ ಮತ್ತೊಮ್ಮೆ ಮದುವೆಯಾಗಲಿದ್ದಾರೆ. ಇಂದು ಆರತಕ್ಷತೆ ಮತ್ತು ನಾಳೆ ಮದುವೆಗೆ ಸ್ಯಾಂಡಲ್ ವುಡ್, ರಾಜಕೀಯದ ಸಾಕಷ್ಟು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ಮುಂದಿನ ಸುದ್ದಿ
Show comments