Select Your Language

Notifications

webdunia
webdunia
webdunia
webdunia

ಸಾಂಪ್ರದಾಯಿಕ ಸೀರೆಯಲ್ಲಿ ನಟಿ ಮಿಲನಾ ನಾಗರಾಜ್ ಬೇಬಿ ಬಂಪ್ ಲುಕ್

Milana Nagaraj Baby Bumb PhotoShoot

Sampriya

, ಶನಿವಾರ, 27 ಜುಲೈ 2024 (17:56 IST)
Photo Courtesy X
ತುಂಬು ಗರ್ಭಿಣಿಯಾಗಿರುವ ನಟಿ ಮಿಲನಾ ನಾಗರಾಜ್ ಅವರು ಇದೀಗ ಸೀರೆಯಲ್ಲಿ ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ಪಿಸ್ತಾ ಕಲರ್ ಸೀರೆಯಲ್ಲಿ ಮಿಂಚಿದ ಮಿಲನಾ ಅವರು ಪತಿ ಡಾರ್ಲಿಂಗ್ ಕೃಷ್ಣ ಅವರೊಂದಿಗೂ ಫೋಟೋಗೆ ಫೋಸ್ ನೀಡಿದ್ದಾರೆ. ಈ ಎಲ್ಲ ಫೋಟೋಗಳನ್ನು ಅವರು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು ದಂಪತಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಪ್ರೀತಿಸಿ ಮದುವೆಯಾದ ಜೋಡಿ. ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ಇವರು ತಮ್ಮ ಮೊದಲ ಮಗುವಿನ ಆಗಮನದ ಖುಷಿಯನ್ನು ಈ ವರ್ಷದ ಆರಂಭದಲ್ಲಿ ಹಂಚಿಕೊಂಡಿದ್ದರು.  ಸೆಪ್ಟೆಂಬರ್ ತಿಂಗಳಿನಲ್ಲಿ ಈ ದಂಪತಿಗೆ ಮಗುವಾಗಲಿದೆ.

ಈ ಜೋಡಿಯ ಲವ್‌ ಮಾಕ್‌ಟೇಲ್ ಸಿನಿಮಾ ನಿರೀಕ್ಷೆಗೂ ಮೀರಿ ಒಳ್ಳೆಯ ರೆಸ್ಪಾನ್ಸ್ ಪಡೆದಿದ್ದು. ಕೊರೊನಾ ಸಂದರ್ಭದಲ್ಲಿ ಜನರಿಗೆ ತುಂಬಾನೇ ಮನರಂಜನೆ ನೀಡಿದ ಸಿನಿಮಾ ಎಂದರೆ ಅದು ಲವ್‌ ಮಾಕ್ಟೇಲ್.

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್‌ ಸಿಂಗ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಾಷ್ಟ್ರಪಶಸ್ತಿ ವಿಜೇತ 'ಉರಿ' ಸಿನಿಮಾ ನಿರ್ದೇಶಕ