Select Your Language

Notifications

webdunia
webdunia
webdunia
webdunia

ಕನ್ನಡ ಚಲನಚಿತ್ರ ಕಪ್ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್

ಕನ್ನಡ ಚಲನಚಿತ್ರ ಕಪ್ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 30 ಜುಲೈ 2019 (09:27 IST)
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ ನ ಈ ವರ್ಷದ ಆವೃತ್ತಿಯ ದಿನಾಂಕ ಘೋಷಣೆಯಾಗಿದೆ. ಕಿಚ್ಚ ಸುದೀಪ್ ಮೂರನೇ ಆವೃತ್ತಿಯ ಟೂರ್ನಮೆಂಟ್ ಆರಂಭ ಯಾವಾಗ ಎಂದು ಪ್ರಕಟಿಸಿದ್ದಾರೆ.


ಮೈಸೂರಿನಲ್ಲಿ ಸೆಪ್ಟೆಂಬರ್ 6, 7 ಮತ್ತು 8 ರಂದು ಕೆಸಿಸಿ ಮೂರನೇ ಆವೃತ್ತಿಯ ಪಂದ್ಯಗಳು ನಡೆಯಲಿವೆ ಎಂದು ಕಿಚ್ಚ ಘೋಷಿಸಿದ್ದಾರೆ.

10 ಓವರ್ ಗಳ ಪಂದ್ಯದಲ್ಲಿ ಈ ಬಾರಿ ಪ್ರತೀ ತಂಡ ಒಟ್ಟು ಐದು ಪಂದ್ಯಗಳನ್ನು ಆಡಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ. ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಯರ ಒಟ್ಟು ಆರು ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಲಿವೆ. ಕಳೆದ ಬಾರಿ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗೋಲ್ಡನ್ ‍ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಆರು ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟ ವಿಜಯ್ ಗೆ ಶ್ರದ್ಧಾಂಜಲಿ ಹೇಳಿದವರ ವಿರುದ್ಧ ಕಿಡಿ ಕಾರಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್