Select Your Language

Notifications

webdunia
webdunia
webdunia
webdunia

ವಿದೇಶಕ್ಕೆ ಹೊರಟ ಪ್ರಿಯಾಂಕಾ ಉಪೇಂದ್ರ ದೇವಕಿ ಸಿನಿಮಾ

ವಿದೇಶಕ್ಕೆ ಹೊರಟ ಪ್ರಿಯಾಂಕಾ ಉಪೇಂದ್ರ ದೇವಕಿ ಸಿನಿಮಾ
ಬೆಂಗಳೂರು , ಸೋಮವಾರ, 29 ಜುಲೈ 2019 (09:46 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಸಿನಿಮಾಗಳು ವಿದೇಶಗಳಲ್ಲೂ ಸದ್ದು ಮಾಡುತ್ತಿರುವುದು ಸಾಮಾನ್ಯವಾಗಿದೆ. ಈಗ ಆ ಸಾಲಿಗೆ ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಸಿನಿಮಾವೂ ಸೇರಿದೆ.


ಪ್ರಿಯಾಂಕಾ ಉಪೇಂದ್ರ ಮತ್ತು ಪುತ್ರಿ ಐಶ್ವರ್ಯಾ ಇದೇ ಮೊದಲ ಬಾರಿಗೆ ತೆರೆಯಲ್ಲಿ ಕಾಣಿಸಿಕೊಂಡಿದ್ದ ದೇವಕಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಸಿನಿಮಾವೀಗ ಸಿಂಗಾಪುರ್ ನಲ್ಲಿ ತೆರೆ ಕಾಣಲಿದೆ. ಆಗಸ್ಟ್ 4 ರಂದು ಭಾನುವಾರ ಮೊದಲ ಶೋ ತೆರೆಕಾಣಲಿದೆ. ಈ ಶೋ ವೀಕ್ಷಿಸಲು ಪ್ರಿಯಾಂಕಾ ಉಪೇಂದ್ರ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಹಾಜರಿರಲಿದ್ದಾರೆ. ಇಲ್ಲಿನ ಕನ್ನಡಿಗರಿಗೆ ರಿಯಲ್ ಸ್ಟಾರ್ ದಂಪತಿಗಳನ್ನು ಭೇಟಿಯಾಗಲು ಮತ್ತು ಒಂದು ಒಳ್ಳೆಯ ಸಿನಿಮಾ ನೋಡಲು ಉತ್ತಮ ಅವಕಾಶ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಗೆ ಕಿಚ್ಚ ಸುದೀಪ್ ಕಂಬನಿ