Publish Date: Wed, 25 Nov 2020 (10:57 IST)
Updated Date: Wed, 25 Nov 2020 (10:59 IST)
ಬೆಂಗಳೂರು: ಕೆಜಿಎಫ್ 2 ಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ರೆಡಿಯಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಲಿದ್ದಾರೆ.
ಇಂದಿನಿಂದ ಹೈದರಾಬಾದ್ ನಲ್ಲಿ ಅಂತಿಮ ಹಂತದ ಚಿತ್ರೀಕರಣ ಆರಂಭಿಸುತ್ತಿರುವ ಚಿತ್ರತಂಡ ಡಿಸೆಂಬರ್ ನಲ್ಲಿ ಶೂಟಿಂಗ್ ಮುಕ್ತಾಯಗೊಳಿಸಲು ಪ್ಲ್ಯಾನ್ ಮಾಡಿದೆ. ಇಂದಿನಿಂದ ಯಶ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ತಿಂಗಳು ಬಾಲಿವುಡ್ ನಟ ಸಂಜಯ್ ದತ್ ಕೂಡಾ ಚಿತ್ರತಂಡ ಕೂಡಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆ ಯಾವಾಗಲೋ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ಕೊಡಲಿದೆ.