ಬೆಂಗಳೂರು: ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಗುಪ್ತಾಂಗದ ಫೋಟೋ ಕಳುಹಿಸಿದ್ದಕ್ಕೇ ಆತನನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿಕೊಂಡು ಹಲ್ಲೆ ನಡೆಸಿದ ಪರಿಣಾಮ ಆತ ಹತ್ಯೆಯಾಗಿದ್ದಾನೆ ಎಂದು ಆರೋಪವಾಗಿದೆ. ಆದರೆ ಇಲ್ಲೊಬ್ಬ ಕಿರುತೆರೆ ನಟಿಗೂ ಕಾಮುಕನಿಂದ ಇದೇ ಅನುಭವವಾಗಿದೆ. ಆದರೆ ಆಕೆ ಮಾಡಿದ್ದೇನು ಗೊತ್ತಾ?
ಕನ್ನಡ ಮತ್ತು ತೆಲುಗು ಕಿರುತೆರೆ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿಯೊಬ್ಬರಿಗೆ ಕಾಮುಕನೊಬ್ಬ ನಿರಂತರವಾಗಿ ಗುಪ್ತಾಂಗದ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆತನ ಫಾಲೋ ರಿಕ್ವೆಸ್ಟ್ ಸ್ವೀಕರಿಸದೇ ಇದ್ದಿದ್ದಕ್ಕೆ ನಟಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಾಟ ಕೊಡುತ್ತಿದ್ದ.
ಕೊನೆಗೆ ನಟಿ ಆತನನ್ನು ಕರೆಸಿಕೊಂಡು ಬುದ್ಧಿವಾದವನ್ನೂ ಹೇಳಿದ್ದಾಳೆ. ಆದರೂ ಆತ ಮಾತ್ರ ಮತ್ತೆ ಅಂತಹದ್ದೇ ಕೃತ್ಯ ಮುಂದುವರಿಸಿದ್ದಾನೆ. ಈ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇರಳ ಮೂಲದ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನವೀನ್ ಪದೇ ಪದೇ ನಟಿಗೆ ಗುಪ್ತಾಂಗದ ಫೋಟೋ ಕಳುಹಿಸುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.