ಬೆಂಗಳೂರು: ಐಎಂಡಿಬಿ ಬಿಡುಗಡೆ ಮಾಡಿದ 2025ರ ಭಾರತದ ಅತ್ಯಂತ ಜನಪ್ರಿಯ ತಾರೆಯರ ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದೆ. ವಿಶೇಷವೆಂದರೆ ಈ ಬಾರಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್, ಸಲ್ಮಾನ್ ಸ್ಥಾನ ಪಡೆದಿಲ್ಲ.
ಈ ಬಾರಿ ಟಾಪ್ 10ರಲ್ಲಿ ಬಹುತೇಕ ಹೊಸ ಮುಖಗಳಿವೆ. ಕರ್ನಾಟಕದ ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್, ರಿಷಬ್ ಶೆಟ್ಟಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ತೆಲುಗು ಹಾಗೂ ತಮಿಳಿನ ಯಾರೊಬ್ಬ ಕಲಾವಿದರೂ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಐಎಂಡಿಬಿ ಪ್ರತಿ ವರ್ಷದ ಅಂತ್ಯದಲ್ಲಿ ಜನಪ್ರಿಯ ಸ್ಟಾರ್ಸ್ ಪಟ್ಟಿ ಬಿಡುಗಡೆ ಮಾಡುತ್ತದೆ. ವರ್ಷ ಪೂರ್ತಿ ಹೆಚ್ಚು ಟ್ರೆಂಡ್ ಆದ ಸೆಲೆಬ್ರಿಟಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಕನ್ನಡದವರಾದ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪಟ್ಟಿಯಲ್ಲಿ ಇದ್ದಾರೆ.
ಸಯ್ಯಾರ ಸಿನಿಮಾ ಮೂಲಕ ಹಿಟ್ ಆದ ಜೋಡಿ ಎಂದರೆ ಅದು ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ. ಇವರಿಬ್ಬರು ಜನಪ್ರಿಯ ತಾರೆ ಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಆಮಿರ್ ಖಾನ್ ಇದ್ದಾರೆ. ಇಶಾನ್ ಖಟ್ಟರ್ಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಬ್ಯಾಡ್ಸ್ ಆಫ್ ಬಾಲಿವುಡ್ ಮೂಲಕ ಮಿಂಚಿದ ಲಕ್ಷ್ಯ್ಗೆ ಐದನೇ ಸ್ಥಾನ ಸಿಕ್ಕಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಆರನೇ ಸ್ಥಾನ ಸಿಕ್ಕಿದೆ. ಲೋಕಃ ಸಿನಿಮಾ ಮೂಲಕ ಮತ್ತಷ್ಟು ಜನ ಮನ್ನಣೆ ಪಡೆದ ಕಲ್ಯಾಣಿ ಪ್ರಿಯದರ್ಶನ್ 7ನೇ ಸ್ಥಾನದಲ್ಲಿ ಇದ್ದಾರೆ.
ಗ್ಲಾಮರ್ ಮೂಲಕ ಮಿಂಚೋ ತೃಪ್ತಿ ದಿಮ್ರಿಗೆ ಪಟ್ಟಿಯಲ್ಲಿ 8ನೇ ಸ್ಥಾನ. ಕಾಂತಾರ: ಚಾಪ್ಟರ್ 1 ಚಿತ್ರದ ನಟಿ ರುಕ್ಮಿಣಿ ವಸಂತ್ ಅವರು 9ನೇ ಸ್ಥಾನದಲ್ಲಿ ಇದ್ದಾರೆ. ಈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 10ನೇ ಸ್ಥಾನ ಸಿಕ್ಕಿದೆ.