ಬೆಂಗಳೂರು: ಸಾಮಾಜಿಕ ಸಾನ್ವಿಗೆ ತಂದೆ ಕಿಚ್ಚ ಸುದೀಪ್ ಹಾಗೂ ತಾಯಿ ಪ್ರಿಯಾ ಅವರು ಅರಿಶಿನ ಹಚ್ಚುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಒಮ್ಮೆಲೇ ಈ ಫೋಟೋವನ್ನು ನೋಡಿದಾಗ ಸಾನ್ವಿ ಮದುವೆಯಾಗುತ್ತಿದ್ದಾರೆಂಬ ಪ್ರಶ್ನೆ ಹುಟ್ಟುತ್ತದೆ.
ಆದರೆ ನಿಜವಾಗಲೂ ಇದು ಸುದೀಪ್ ಅವರ ಅಕ್ಕನ ಮಗನ ಮದುವೆಯ ಅರಿಶಿನ ಶಾಸ್ತ್ರದಲ್ಲಿ ತೆಗೆದಿರುವ ಫೋಟೋವಾಗಿದೆ. ಈ ಸಂದರ್ಭದಲ್ಲಿ ಸಾನ್ವಿಗೂ ತಂದೆ ತಾಯಿಯರಾದ ಸುದೀಪ್ ಹಾಗೂ ಪ್ರಿಯಾ ಹಚ್ಚಿದ್ದಾರೆ. ಇದನ್ನು ಸಾನ್ವಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ಅರಿಶಿನ ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೂ ಅರಿಶಿಣ ಹಚ್ಚುವ ಪದ್ಧತಿ ಬಹುಶಃ ಇರುತ್ತೆ. ಹೀಗಾಗೇ ಸಾನ್ವಿ ಕೂಡ ಅರಿಶಿಣ ಹಚ್ಚಿಸಿಕೊಂಡಿದ್ದಾರೆ. ಸುದೀಪ್ ಅವರ ತಮ್ಮ ಅಕ್ಕನ ಮಗನ ಮದುವೆಯಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.
ಇದರಲ್ಲಿ ಸಾನ್ವಿ ಅವರು ಸಾಂಪ್ರದಾಯಿಕ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.