Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ವಿಜಯ್ ದೇವರಕೊಂಡ. ಕಿಂಗ್ಡಮ್ ಸಿನಿಮಾ ವಿಮರ್ಶೆ

Sampriya

ಬೆಂಗಳೂರು , ಶನಿವಾರ, 2 ಆಗಸ್ಟ್ 2025 (17:47 IST)
Photo Credit X
ಸಾಲು ಸಾಲು ಪ್ಲಾಪ್ ಸಿನಿಮಾದಿಂದ ಕಂಗೆಟ್ಟಿದ ನಟ ವಿಜಯ್ ದೇವರಕೊಂಡಗೆ ಕಿಂಗ್‌ಡಮ್ ಸಿನಿಮಾ ಇದೀಗ ಮರುಜೀವ ನೀಡಿದೆ. 

ಕಿಂಗ್‌ಡಮ್ ಸಿನಿಮಾದ ಯಶಸ್ಸು ದೀರ್ಘಕಾಲದ ಸೋಲಿನ ಸರಣಿಯನ್ನು ಕೊನೆಗೊಳಿಸಿತು.  130ಕೋಟಿ ಬಜೆಟ್‌ನಲ್ಲಿ ಮೂಡಿಬಂದ ಕಿಂಗ್‌ಡಮ್ ಸಿನಿಮಾಗೆ ಇದೀಗ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಿಡುಗಡೆಯಾದ ಎರಡನೇ ದಿನದಲ್ಲೇ ₹53 ಕೋಟಿ ಬಾಚಿಕೊಂಡು, ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 

ಸಿನಿಮಾ ಯಶಸ್ವಿನ ಬೆನ್ನಲ್ಲೇ ವಿಜಯ್‌ದೇವರಕೊಂಡ ಅವರ ಗರ್ಲ್‌ಫ್ರೆಂಡ್‌ ಎಂದೇ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಅವರು ಟ್ವಿಟರ್‌ನಲ್ಲಿ ತಮ್ಮ ಸ್ನೇಹಿತನ ಯಶಸ್ವಿ ಬಗ್ಗೆ ಖುಷಿ ಹಂಚಿ, ಮನಮ್ ಕೊಟ್ಟಿನಮ್ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ತಮ್ಮ ಗೆಳೆಯನ ಸಿನಿಮಾ ಯಶಸ್ಸನ್ನು ನಟಿ ಸಂಭ್ರಮಿಸಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದಾರೆಂಬ ಸುದ್ದಿಯಿದೆ. ವಿದೇಶಕ್ಕೆ ಒಟ್ಟಿಗೆ ಆಗಾಗ ಪ್ರಯಾಣ ಬೆಳೆಸಿರುವ ಈ ಜೋಡಿ, ಡೇಟಿಂಗ್ ವದಂತಿ ಬಗ್ಗೆ ಇದುವರೆಗೆ ಮೌನ ಮುರಿದಿಲ್ಲ. 

ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಕಿಂಗ್‌ಡಮ್' ಗುರುವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. 

ಗೌತಮ್ ತಿನ್ನನೂರಿ ನಿರ್ದೇಶಿಸಿದ, ಬಲವಾದ ಆರಂಭಿಕ ಪ್ರದರ್ಶನದ ನಂತರ, 'ಕಿಂಗ್‌ಡಮ್' ಎರಡು ದಿನಗಳಲ್ಲಿ ಭಾರತದಲ್ಲಿ ಒಟ್ಟು ₹25.50 ಕೋಟಿ ಗಳಿಸಿತು. 

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ