ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಇಂದು ತಮ್ಮ ಅಭಿನಯದ ಮೂಲಕ ನ್ಯಾಶನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣಗೆ ಭಾರೀ ಬೇಡಿಕೆಯಲ್ಲಿದ್ದಾರೆ. ಆದರೆ ಯಾವುದೇ ಕಾರಣಕ್ಕು ಎಷ್ಟೇ ದುಟ್ಟು ಕೊಟ್ರೂ ಆ ಒಂದು ಕೆಲಸ ಮಾಡಲ್ಲ ಎಂದು ಕಂಡೀಷನ್ ವೊಂದನ್ನು ಹೇಳಿಕೊಂಡಿದ್ದಾರೆ.
ಛಾವಾ, ಪುಪ್ಪಾ ಯಶಸ್ವಿ ಬಳಿಕ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ತೆಲಗು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಲಂಡನ್‌ನಲ್ಲಿ ನಡೆದ ವಿ ದ ವಿಮನ್ ಕಾರ್ಯಕ್ರಮದಲ್ಲಿ ನಟಿಯ ಸಾಮಾಜಿಕ ಪ್ರಜ್ಞೆಯ ಹೇಳಿಕೊಂದು ಭಾರೀ ಮೆಚ್ಚುಗೆ ಪಾತ್ರವಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಧೂಮಪಾನದ ದೃಶ್ಯಗಳು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ತಾನೂ ಅದು ಪೋಷಿಸದಿರಲು ನಿರ್ಧರಿಸಿದ್ದಾರೆ. "ನನಗೆ ಧೂಮಪಾನ ಇಷ್ಟವಿಲ್ಲ. ನಾನು ಅದನ್ನು ವಿರೋಧಿಸುತ್ತೇನೆ. ಹಾಗಾಗಿ ನಾನು ಅಂತಹ ಸಿನಿಮಾ ದೃಶ್ಯದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.