Select Your Language

Notifications

webdunia
webdunia
webdunia
webdunia

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

National Krush Rashmika Mandanna, Tollywood Hero Vijay Devarakonda, Kubera Movie

Sampriya

ಬೆಂಗಳೂರು , ಬುಧವಾರ, 18 ಜೂನ್ 2025 (17:51 IST)
Photo Credit X
ಬೆಂಗಳೂರು: ನ್ಯಾಷನಲ್‌ ಕೃಷ್‌ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ ಹೀರೊ ವಿಜಯ್ ದೇವರಕೊಂಡ ನಡುವಿನ ಪ್ರೇಮಕಥನ ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಬಗ್ಗೆ ಅವರಿಬ್ಬರೂ ಖಚಿತ ಪಡಿಸಿಲ್ಲ. ಇದೀಗ ಒಟ್ಟಿಗೆ ಪ್ರಯಾಣ ಮಾಡುವ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಂದೇ ಕಾರಲ್ಲಿ ಸುತ್ತಾಟ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ರಶ್ಮಿಕಾ ನಟನೆಯ ಬಹುನಿರೀಕ್ಷಿತ ಕುಬೇರ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಜೂನ್ 20ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಇಡೀ ತಂಡ ಬ್ಯುಸಿ ಇದೆ. ಇದರ ಭಾಗವಾಗಿ ರಶ್ಮಿಕಾ ಅವರು ಮುಂಬೈಗೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ವಿಜಯ್ ಕೂಡ ಅಲ್ಲಿಯೇ ಇದ್ದರು. ಇಬ್ಬರೂ ವಿಮಾನ ನಿಲ್ದಾಣದಿಂದ ಹೊರ ಬಂದು ಕಾರಿನಲ್ಲಿ ಒಟ್ಟಾಗಿ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಇಬ್ಬರೂ ಮುಖವನ್ನು ಮುಚ್ಚಿಕೊಂಡಿದ್ದರು.

ರಶ್ಮಿಕಾ ಈಚೆಗೆ ಈವೆಂಟ್ ಒಂದರಲ್ಲಿ ಭಾಗಿ ಆಗಿದ್ದರು. ಅವರಿಗೆ ವಿಜಯ್ ಅವರಲ್ಲಿ ಯಾವ ವಿಷಯ ಇಷ್ಟ ಎಂದು ಕೇಳಿದಾಗ ಎಲ್ಲಾ ವಿಚಾರಗಳೂ ಇಷ್ಟ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಸದ್ಯ ರಶ್ಮಿಕಾಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಹೀಗಾಗಿ, ಅವರು ಸದ್ಯಕ್ಕಂತೂ ವಿವಾಹ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು