Select Your Language

Notifications

webdunia
webdunia
webdunia
webdunia

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

Kamal Hassan

Krishnaveni K

ಬೆಂಗಳೂರು , ಬುಧವಾರ, 18 ಜೂನ್ 2025 (09:29 IST)
ಬೆಂಗಳೂರು: ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಏನೋ ಆದೇಶ ನೀಡಿದೆ. ಆದರೆ ಫ್ಲಾಪ್ ಆಗಿರುವ ಸಿನಿಮಾವನ್ನು ಇಲ್ಲಿ ಬಿಡುಗಡೆ ಮಾಡಲು ವಿತರಕರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಕನ್ನಡ ಕಲಾವಿದರೂ ಸಿನಿಮಾ ಬಹಿಷ್ಕರಿಸಿ ಎಂದು ಕರೆಕೊಟ್ಟಿದ್ದಾರೆ.

ಕನ್ನಡಕ್ಕೆ ಅವಮಾನ ಮಾಡಿದ ಕಾರಣಕ್ಕೆ ಕಮಲ್ ಹಾಸನ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ವಾಣಿಜ್ಯ ಮಂಡಳಿ ನಿಷೇಧ ಹೇರಿತ್ತು. ಇದಕ್ಕೆ ರಾಜ್ಯ ಸರ್ಕಾರವೂ  ಬೆಂಬಲಿಸಿತ್ತು. ಕರ್ನಾಟಕ ಹೈಕೋರ್ಟ್ ನಲ್ಲಿ ಕಮಲ್ ಹಾಸನ್ ಈ ಬಗ್ಗೆ ಅರ್ಜಿ ಸಲ್ಲಿಸಿದರೆ ಕ್ಷಮೆ ಕೇಳುವಂತೆ ಕೋರ್ಟ್ ಆದೇಶಿಸಿತ್ತು.

ಆದರೆ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಮಲ್ ಹಾಸನ್ ಗೆ ಜಯವಾಗಿದೆ. ಅಲ್ಲಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ಅನುವು ಮಾಡಿಕೊಡಿ ಎಂದು ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು. ಆದರೆ ಸಿನಿಮಾ ಬಿಡುಗಡೆ ಮಾಡಲು ಈಗ ಇಲ್ಲಿನ ವಿತರಕರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.


ಒಂದೆಡೆ ಕರ್ನಾಟಕದಲ್ಲಿ ನಿಷೇಧದ ಭೀತಿಯಾದರೆ ವಿತರಕರಿಗೆ ಇನ್ನೊಂದು ತಲೆಬಿಸಿ ಬೇರೆ ರಾಜ್ಯಗಳಲ್ಲಿ ಸಿನಿಮಾಗೆ ಬಂದ ಪ್ರತಿಕ್ರಿಯೆ. ಈಗಾಗಲೇ ಥಗ್ ಲೈಫ್ ಪರ ರಾಜ್ಯಗಳಲ್ಲಿ ಬಿಡುಗಡೆಯಾಗಿ ಫ್ಲಾಪ್ ಆಗಿದೆ. ಜನರು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಹೀಗಿರುವಾಗ ಕನ್ನಡವಲ್ಲದ ಒಂದು ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿ ದುಡ್ಡು ನಷ್ಟ ಮಾಡಿಕೊಳ್ಳಲು ಇಲ್ಲಿನ ವಿತರಕರು ರೆಡಿ ಇಲ್ಲ. ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಎರಡು ವಾರವಾಗಿದೆ. ಇನ್ನು ಇಲ್ಲಿ ಬಿಡುಗಡೆ ಮಾಡುವುದರಿಂದ ಯಾವುದೇ ಲಾಭ ಗಿಟ್ಟದು ಎನ್ನುವುದು ವಿತರಕರ ಅಭಿಪ್ರಾಯವಾಗಿದೆ. ಜೊತೆಗೆ ನಟ ಶ್ರೀನಗರ ಕಿಟ್ಟಿ ನಿನ್ನೆ ಥಗ್ ಲೈಫ್ ಸಿನಿಮಾವನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ