Select Your Language

Notifications

webdunia
webdunia
webdunia
Friday, 25 April 2025
webdunia

ಕಮಲ್ ಹಾಸನ್ ರಾಜಕೀಯ ಸೇರುವುದು ಖಚಿತ: ಯಾವ ಪಕ್ಷ?

ಕಮಲ್ ಹಾಸನ್
ಚೆನ್ನೈ , ಬುಧವಾರ, 13 ಸೆಪ್ಟಂಬರ್ 2017 (11:41 IST)
ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ  ಪಕ್ಷ ಸೇರುವುದಾಗಿ ಈ ಮೊದಲೇ ಹೇಳಿಕೊಂಡು ಬಂದಿದ್ದಾರೆ. ಅದೀಗ ಪಕ್ಕಾ ಆಗಿದೆ. ಆದರೆ ಯಾವ ಪಕ್ಷ ಸೇರುತ್ತಾರೆ? ಇಲ್ಲಿ ನೋಡಿ.

 
ಕಮಲ್ ಹಾಸನ್ ತನ್ನದು ಕೆಂಪು ಬಣ್ಣ, ಕೇಸರಿ ಬಣ್ಣವಲ್ಲ ಎಂದಿದ್ದರು. ಹೀಗಾಗಿ ಅವರು ಎಡರಂಗ ಸೇರಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದಕ್ಕೆ ಪೂರಕವಾಗಿ ಎಡರಂಗದ ನಾಯಕರನ್ನು ಭೆಟಿಯಾಗಿದ್ದರು.

ಆದರೆ ಅದೆಲ್ಲಾ ತಲೆಕೆಳಗು ಮಾಡಿ ಇದೀಗ ಸ್ವಂತ ಪಕ್ಷ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದಾರೆ. ಹೊಸ ಪಕ್ಷ ಸ್ಥಾಪನೆಗೆ ಎಲ್ಲಾ ತಯಾರಿ ನಡೆಸುತ್ತಿದೆ. ವಿಜಯದಶಮಿ ಅಥವಾ ಗಾಂಧಿ ಜಯಂತಿ ದಿನ ಹೊಸ ಪಕ್ಷದ ಹೆಸರು ಘೋಷಣೆ ಮಾಡಬಹುದು ಎಂದು ಕಮಲ್ ಆಪ್ತರು ಹೇಳಿದ್ದಾರೆ. ಇದರೊಂದಿಗೆ ತಮಿಳುನಾಡಿನಲ್ಲಿ ಹೊಸ ಪಕ್ಷವೊಂದರ ಉದಯವಾಗಲಿದೆ.

ಇದನ್ನೂ ಓದಿ.. ವೃದ್ಧರ ಚಿಕಿತ್ಸೆಗೆ 6 ಸಾವಿರ ರೂ.  ನೀಡಿದ ಸಿಎಂ ಸಿದ್ದರಾಮಯ್ಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಜತೆ ಲಿಪ್ ಲಾಕ್ ಮಾಡುವ ದೃಶ್ಯವನ್ನೇ ಪ್ರಕಟಿಸಿದ ಬಾಲಿವುಡ್ ನಟಿ