Select Your Language

Notifications

webdunia
webdunia
webdunia
webdunia

‘ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವ ನಾಶವಾಗಲಿ’

ಎಂಬಿ ಪಾಟೀಲ್
ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ನಾನು ತಿರುಚಿದ್ದರೆ, ಸುಳ್ಳು ಹೇಳಿದ್ದರೆ, ನನ್ನ ಕುಟುಂಬ ಸರ್ವನಾಶವಾಗಲಿ ಎಂದು ಸಚಿವ ಎಂಬಿ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ.

 
ಸಿದ್ದಗಂಗಾ ಶ್ರೀಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಒಲವಿದೆ. ಆದರೆ ಬಿಜೆಪಿಯ ಯಡಿಯೂರಪ್ಪ, ಸೋಮಣ್ಣ ಮುಂತಾದವರು ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದರು.

ಇದನ್ನು ಬಿಜೆಪಿ ಆಕ್ಷೇಪಿಸಿತ್ತು. ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ಸಚಿವರು ತಿರುಚಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಾನು ಸುಳ್ಳು ಹೇಳಿಲ್ಲ. ಈ ಬಗ್ಗೆ ಕುಟುಂಬ ಸಮೇತ ಸಿದ್ದಗಂಗಾ ಮಠದಲ್ಲಿ ಪ್ರಮಾಣ ಮಾಡಲು ಸಿದ್ದ. ಸುಳ್ಳು ಹೇಳಿದ್ದಾದರೆ ನನ್ನ ಕುಟುಂಬ ಸರ್ವನಾಶವಾಗಲಿ ಎಂದಿದ್ದಾರೆ.

ಇದನ್ನೂ ಓದಿ.. ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ