Select Your Language

Notifications

webdunia
webdunia
webdunia
webdunia

ಕಬ್ಜ ಸಿನಿಮಾ ಯಾಕೆ ನೋಡಬೇಕು?

ಕಬ್ಜ ಸಿನಿಮಾ ಯಾಕೆ ನೋಡಬೇಕು?
ಬೆಂಗಳೂರು , ಭಾನುವಾರ, 12 ಮಾರ್ಚ್ 2023 (09:10 IST)
Photo Courtesy: Twitter
ಬೆಂಗಳೂರು: ಕನ್ನಡ ಮೂಲದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಲು ಹೊರಟಿದೆ. ಅದು ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ.

ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಶ್ರಿಯಾ ಸರಣ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ರಂತಹ ಘಟಾನುಘಟಿಗಳಿದ್ದಾರೆ.

ಈ ಸಿನಿಮಾ ಇದೀಗ ಕೆಜಿಎಫ್ ಸಿನಿಮಾದಂತೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯಾಗಲಿದೆ. ಅದ್ಧೂರಿ ಮೇಕಿಂಗ್, ಸಾಹಸ ದೃಶ್ಯ, ಹಿನ್ನಲೆ ಸಂಗೀತದಿಂದ ಈಗಲೇ ಬಹುಭಾಷೆಗಳಲ್ಲಿ ಕಬ್ಜ ಗಮನಸೆಳೆಯುತ್ತಿದೆ. ಮಾರ್ಚ್ 17 ರಂದು ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮಾತ್ರವಲ್ಲದೆ, ಬೆಂಗಾಳಿ ಮತ್ತು ಮರಾಠಿಯಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. 1980 ರ ದಶಕದ ಭೂಗತ ಕತೆ ಹೊಂದಿರುವ ಸಿನಿಮಾಗಾಗಿ ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂಲಗಳ ಪ್ರಕಾರ ಚಿತ್ರದ ಬಜೆಟ್ 120 ಕೋಟಿ ಗೂ ಅಧಿಕ. ಕೆಜಿಎಫ್, ಕಾಂತಾರ, 777 ಚಾರ್ಲಿ, ವಿಕ್ರಾಂತ್ ರೋಣ ಬಳಿಕ ಮತ್ತೊಂದು ಕನ್ನಡ ಸಿನಿಮಾ ಈಗ ಸದ್ದು ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ವೇದಿಕೆಯಲ್ಲಿ ನಾಟ್ಟು ನಾಟ್ಟು ಹಾಡಿಗೆ ಹೆಜ್ಜೆ ಹಾಕಲಿರುವ ಸುಂದರಿ ಇವರೇ!