'ವಾರ್‌2' ಸಿನಿಮಾಕ್ಕೆ ಜೂನಿಯರ್‌ ಎನ್‌ಟಿಆರ್‌ ಭರ್ಜರಿ ಕಸರತ್ತು

Sampriya
ಸೋಮವಾರ, 22 ಜುಲೈ 2024 (17:34 IST)
Photo Courtesy X
ಅಯನ್ ಮುಖರ್ಜಿ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಜೂನಿಯರ್ ಎನ್‌ಟಿಆರ್  ಅವರು ಅಭಿನಯದ ಬಹು ನಿರೀಕ್ಷಿತ  'ವಾರ್ 2' ಚಿತ್ರದ ಎರಡನೇ ಶೆಡ್ಯೂಲ್ ಅನ್ನು ಆಗಸ್ಟ್ 18 ರಂದು ಪ್ರಾರಂಭಿಸಲಿದ್ದಾರೆ. ಈ ಹಿನ್ನೆಲೆ ಶೀಘ್ರದಲ್ಲೇ ಜೂನಿಯರ್ ಎನ್‌ಟಿಆರ್‌ ಮುಂಬೈಗೆ ತೆರಳಲಿದ್ದಾರೆ.

ಸಾಹಸ ಪಾತ್ರಗಳ ಮೂಲಕನೇ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಜೂನಿಯರ್ ಎನ್‌ಟಿಆರ್‌ ಅವರು ಈ ಸಿನಿಮಾದ ಎರಡನೇ ಶೆಡ್ಯೂಲ್‌ನಲ್ಲಿ ತೀವ್ರವಾದ ಆಕ್ಷನ್ ಸೀಕ್ವೆನ್ಸ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಆರ್‌ಆರ್‌ಆರ್‌ನ ಯಶಸ್ಸಿನ ನಂತರ ಇದೀಗ ಎನ್‌ಟಿಆರ್ ಜೂನಿಯರ್‌ನ ಪ್ಯಾನ್-ಇಂಡಿಯಾ ಆಕ್ಷನ್ ಸ್ಪೆಕ್ಟೇಕಲ್ ವಾರ್ 2 ಅನ್ನು ಅಯನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ಇದು ಭಾರಿ ನಿರೀಕ್ಷಿತ ಚಿತ್ರವಾಗಿದೆ.

ಇನ್ನೂ ಸಿಕ್ಕಾ ಮಾಹಿತಿ ಪ್ರಕಾರ ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಜೂನಿಯರ್ ಎನ್‌ಟಿಆರ್‌ ಅವರು ಸಾಹಸ ಪ್ರದರ್ಶನ ಮೆರೆಯಲಿದ್ದಾರೆ. ಈ ಮೂಲಕ ವಾರ್ 2 ನಲ್ಲಿ ಹಿಂದೆಂದೂ ನೋಡಿರದ ಅವತಾರದಲ್ಲಿ ಜೂನಿಯರ್‌ ಎನ್‌ಟಿಆರ್‌ ಅವರನ್ನು ನೋಡಬಹುದು.

ವಾರ್ 2 ಸಿನಿಮಾಗೆ ಆದಿತ್ಯ ಚೋಪ್ರಾ ಅವರು ಬಂಡವಾಳ ಹೂಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಟೈಗರ್ 3, ವಾರ್ ಮತ್ತು ಪಠಾನ್ ನಂತರ YRF ಸ್ಪೈ ಯೂನಿವರ್ಸ್‌ನಲ್ಲಿ ಆರನೇ ಚಿತ್ರವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಮೈಮಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ತಮನ್ನಾ ಭಾಟಿಯಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಮುಂದಿನ ಸುದ್ದಿ
Show comments