Webdunia - Bharat's app for daily news and videos

Install App

ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಟ್ಟಿದ್ದ ತಾಯ್ತಕ್ಕೂ ಬಂತು ಕುತ್ತು

Krishnaveni K
ಬುಧವಾರ, 23 ಅಕ್ಟೋಬರ್ 2024 (16:53 IST)
ಬಳ್ಳಾರಿ: ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್ ಗೆ ಒಳ್ಳೆಯದಾಗಲೆಂದು ಮಂತ್ರಿಸಿ ತಂದು ಕುತ್ತಿಗೆಗೆ ಕಟ್ಟಿದ್ದ ತಾಯ್ತವನ್ನೂ ಜೈಲು ಸಿಬ್ಬಂದಿಗಳು ಕಿತ್ತು ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರಿಗೆ ಇತ್ತೀಚೆಗೆ ಜಾಮೀನು ನಿರಾಕರಣೆಯಾಗಿತ್ತು. ಜೊತೆಗೆ ಬೆನ್ನು ನೋವು ಕೂಡಾ ತೀವ್ರವಾಗಿ ಕಾಡಲಾರಂಭಿಸಿದೆ. ನಿನ್ನೆ ರಾತ್ರೋ ರಾತ್ರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮಿ ತಮ್ಮ ಪತಿಗೆ ಕೆಡುಕಾಗದಂತೆ ತಾಯ್ತವೊಂದನ್ನು ಕಟ್ಟಿದ್ದರು. ಆದರೆ ಇದನ್ನು ಈಗ ಜೈಲು ಅಧಿಕಾರಿಗಳು ಕಿತ್ತು ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ. ಜೈಲು ನಿಯಮದ ಪ್ರಕಾರ ಖೈದಿಗಳು ಕುತ್ತಿಗೆಗೆ ಚೈನು, ದಾರ ಇತ್ಯಾದಿ ಕಟ್ಟುವಂತಿಲ್ಲ.

ಈಗಾಗಲೇ ಜೈಲು ನಿಯಮ ಉಲ್ಲಂಘನೆಯಾದ ನಿಟ್ಟಿನಲ್ಲಿ ಪೊಲೀಸರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಹೀಗಾಗಿ ಈಗ ದರ್ಶನ್ ವಿಚಾರದಲ್ಲಿಜೈಲು ಅಧಿಕಾರಿಗಳು ಕಟ್ಟುನಿಟ್ಟಾಗಿದ್ದಾರೆ. ಕುತ್ತಿಗೆಗೆ ದಾರ ಕಟ್ಟುವುದು ಜೈಲಿನ ನಿಯಮಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ತೆಗೆಯಲು ಸೂಚಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

ಸು ಫ್ರಮ್ ಸೋ ಮೂವಿ ಬಜೆಟ್ ಎಷ್ಟಿತ್ತು, ಗಳಿಸಿದ್ದೆಷ್ಟು ನೋಡಿದರೆ ಅಚ್ಚರಿಯಾಗ್ತೀರಿ

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments