Publish Date: Tue, 25 Feb 2020 (13:15 IST)
Updated Date: Tue, 25 Feb 2020 (13:18 IST)
ಜಗ್ಗಿ ಜಗನ್ನಾಥ..ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಗೆ ಸಿದ್ದವಾಗಿರೋ ಚಿತ್ರ. ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಟ್ರೈಲರ್ ಮೂಲಕ ಸೌಂಡ್ ಮಾಡ್ತಿರೋ ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಲಿಖಿತ್, ದುನಿಯಾ ರಶ್ಮಿ ಅಭಿನಯಿಸಿರುವ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಖಾಕಿ ತೊಟ್ಟಿದ್ದಾರೆ. ಚಿತ್ರದ ಟ್ರೈಲರ್ನಲ್ಲಿ ಡೈಲಾಗ್ ಕಿಂಗ್ ಪವರ್ ಫುಲ್ ಡೈಲಾಗ್ ಹಾಗೂ ಆಕ್ಷನ್ ಸೀನ್ಗಳು ಸಖತ್ ಕಿಕ್ ಕೊಡುತ್ತಿವೆ.
ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ರೌಡಿಸಂ, ಮಾಫಿಯ ಜಗತ್ತು, ಪ್ರೇಮ್ ಕಹಾನಿ, ಪೊಲೀಸ್ ಸೂಪರ್ ಕಾಪ್ ಸ್ಟೋರಿ ಚಿತ್ರದಲ್ಲಿದ್ದು, ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಪೆಟ್ರೋಲ್ ಪ್ರಸನ್ನ ಚಿತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದು, ಪದ್ಮಜಾ ರಾವ್, ತಬಲ ನಾಣಿ, ಪವನ್, ಮೈಕೋ ನಾಗರಾಜ್, ವಾಣಿಶ್ರೀ, ಮೋಹನ್ ಜುನೇಜಾ ಸೇರಿದಂತೆ ಹಲವು ಕಲಾವಿದರು ಜಗ್ಗಿ ಜಗನ್ನಾಥ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹೆಚ್.ಜಯರಾಜು, ಜಿ.ಶಾರಾದ ನಿರ್ಮಾಪಕರಾಗಿರೋ ಈ ಚಿತ್ರ ಜೈ ಮೈಲಾರ ಲಿಂಗೇಶ್ವರ ಮೂವೀಸ್ ಬ್ಯಾನರ್ನಡಿ ನಿರ್ಮಾಣವಾಗಿದೆ, ಎ.ಎಂ ನೀಲ್ ಸಂಗೀತ ನಿರ್ದೇಶನವಿರುವ ಜಗ್ಗಿ ಜಗನ್ನಾಥ್ ಚಿತ್ರ ಫೆಬ್ರವರಿ 28ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿದೆ.