Select Your Language

Notifications

webdunia
webdunia
webdunia
webdunia

ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ 2016 ಟ್ರೈಲರ್ ಇಂದು

ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ 2016 ಟ್ರೈಲರ್ ಇಂದು
ಬೆಂಗಳೂರು , ಸೋಮವಾರ, 17 ಫೆಬ್ರವರಿ 2020 (08:58 IST)
ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಎರಡನೇ ಸಿನಿಮಾ ಮಾಯಾಬಜಾರ್ 2016. ಇದರ ಟ್ರೈಲರ್ ಇಂದು ಲಾಂಚ್ ಆಗಲಿದೆ.


ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿರುವ ಈ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆಯಲಾದ ಕತೆ ಎಂಬ ಅಂಶವನ್ನು ಹೊರಹಾಕಿದೆ. ಈ ಸಿನಿಮಾ ಇದೇ ತಿಂಗಳು 28 ರಂದು ತೆರೆಗೆ ಬರಲಿದ್ದು, ಇಂದು ಸಂಜೆ 6 ಗಂಟೆಗೆ  ಶಿವರಾಜ್ ಕುಮಾರ್ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ.

ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಸಿನಿಮಾ ಇದಾಗಿದ್ದು ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಚೈತ್ರಾ ರಾವ್, ಪ್ರಕಾಶ್ ರಾಜ್, ಸುಧಾರಾಣಿ ಮುಂತಾದವರ ತಾರಾಬಳಗವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಿತಿನ್ ಮದುವೆಗೆ ನಾನೇ ಕಾರಣ ಎಂದ ರಶ್ಮಿಕಾ ಮಂದಣ್ಣ!