ಬೆಂಗಳೂರು: ಕಿರುತೆರೆಯ ಖ್ಯಾತ ನಟ, ಹೆಂಗಳೆಯರ ಮೆಚ್ಚಿನ ನಟ ವಿಜಯ್ ಸೂರ್ಯ ವಾಲೆಂಟೈನ್ಸ್ ಡೇ ದಿನವಾದ ನಿನ್ನೆ ಕೊಟ್ಟ ಸುದ್ದಿಗೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಕಳೆದ ವರ್ಷ ವಾಲೆಂಟೈನ್ಸ್ ಡೇ ದಿನವೇ ವಿಜಯ್ ಚೈತ್ರಾ ಜತೆಗೆ ವಿವಾಹವಾಗಿದ್ದರು. ಹೀಗಾಗಿ ಈ ಜೋಡಿಗೆ ಇದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ. ಆದರೆ ಅದರ ಜತೆಗೆ ತಮಗೆ ಗಂಡು ಮಗುವಾಗಿರುವ ವಿಚಾರವನ್ನು ಹೇಳಿ ವಿಜಯ್ ಶಾಕ್ ನೀಡಿದ್ದಾರೆ.
ವಾಲೆಂಟೈನ್ಸ್ ಡೇ ವಿಶ್ ಜತೆಗೆ ಜನವರಿ 1 ರಂದು ತಮಗೆ ಗಂಡು ಮಗುವಾಗಿದೆ ಎಂಬ ಅಚ್ಚರಿಯ ಸಂಗತಿಯನ್ನು ತಡವಾಗಿ ಬಹಿರಂಗಪಡಿಸಿದ್ದಾರೆ. ಇದುವರೆಗೆ ಎಲ್ಲೂ ವಿಜಯ್ ದಂಪತಿಗೆ ಮಗುವಾಗಿರುವ ಗುಟ್ಟಾಗಿಯೇ ಇತ್ತು. ಇದೀಗ ಇದ್ದಕ್ಕಿದ್ದಂತೆ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿರುವ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.