Select Your Language

Notifications

webdunia
webdunia
webdunia
webdunia

ಬರ್ತ್ ಡೇ ಆಚರಿಸಲು ಮಂತ್ರಾಯಲಕ್ಕೆ ಹೊರಟ ಜಗ್ಗೇಶ್

ಬರ್ತ್ ಡೇ ಆಚರಿಸಲು ಮಂತ್ರಾಯಲಕ್ಕೆ ಹೊರಟ ಜಗ್ಗೇಶ್
ಬೆಂಗಳೂರು , ಸೋಮವಾರ, 16 ಮಾರ್ಚ್ 2020 (10:24 IST)
ಬೆಂಗಳೂರು: ನಾಳೆ ನವರಸನಾಯಕ ಜಗ್ಗೇಶ್ ಗೆ ಬರ್ತ್ ಡೇ ಸಂಭ್ರಮ. ಪ್ರತೀ ವರ್ಷದ ವಾಡಿಕೆಯಂತೆ ಈ ಬಾರಿಯೂ ಮಂತ್ರಾಲಯಕ್ಕೆ ತೆರಳಿ ಜಗ್ಗೇಶ್ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ.


ರಾಯರ ಪರಮ ಭಕ್ತರಾದ ಜಗ್ಗೇಶ್ ಪ್ರತೀ ವರ್ಷವೂ ಇಲ್ಲಿಯೇ ತಮ್ಮ ಹುಟ್ಟು ಹಬ್ಬವನ್ನು ದೈವಿಕವಾಗಿ ಆಚರಿಸಿಕೊಳ್ಳುತ್ತಾರೆ. ಇದಕ್ಕಾಗಿ ಮಂತ್ರಾಲಯಕ್ಕೆ ಹೊರಟಿದ್ದಾರೆ.

ಈ ಬಾರಿ ಕೊರೋನಾವೈರಸ್ ಭೀತಿಯಿರುವುದರಿಂದ ಬರ್ತ್ ಡೇ ರದ್ದುಗೊಳಿಸುತ್ತಾರೋ ಎಂಬ ಅನುಮಾನಗಳಿಗೆ ಉತ್ತರಿಸಿರುವ ಜಗ್ಗೇಶ್, ಎಂದಿನಂತೇ ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿಗಳ ಚಿತ್ರೀಕರಣಕ್ಕೆ ಅಡ್ಡಿಯಾಗದ ಕೊರೋನಾ