ಕೊರೋನಾ ಭೀತಿ: 20 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಶಿವರಾಜ್ ಕುಮಾರ್!

ಭಾನುವಾರ, 15 ಮಾರ್ಚ್ 2020 (09:00 IST)
ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಕರ್ನಾಟಕ ಒಂದು ವಾರದ ಕಾಲ ಸ್ತಬ್ಧವಾಗಲಿದೆ. ಇದರ ಬಿಸಿ ಚಿತ್ರರಂಗಕ್ಕೂ ತಟ್ಟಿದೆ.


ಕೊರೋನಾ ಭೀತಿ ನಟ ಶಿವರಾಜ್ ಕುಮಾರ್ ಗೆ ತಾವು 20 ವರ್ಷಗಳಿಂದಲೂ ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯಕ್ಕೆ ಬ್ರೇಕ್ ಹಾಕುವಂತೆ ಮಾಡಿದೆ.

ಶಿವಣ್ಣ ಪ್ರತೀ ವರ್ಷವೂ ಮಾಲೆ ಧರಿಸಿ ಶಬರಿಮಲೆ ಯಾತ್ರೆ ತೆರಳುತ್ತಾರೆ. ಅದರಂತೆ ಈ ವರ್ಷವೂ ಯಾತ್ರೆಗೆ ತೆರಳಲು ಮಾಲೆ ಧರಿಸಿದ್ದರು. ಆದರೆ ಕೇರಳದಲ್ಲೂ ಕೊರೋನಾ ಭೀತಿಯಿರುವುದರಿಂದ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದ್ದು ಬೆಂಗಳೂರಿನಲ್ಲಿಯೇ ಇರುವ ಅಯ್ಯಪ್ಪ ದೇವಾಲಯದಲ್ಲಿ ಮಾಲೆ ತೆಗೆಯಲು ನಿರ್ಧರಿಸಿದ್ದಾರೆ. ಆ ಮೂಲಕ ತಾವು ಇಷ್ಟು ಸಮಯದಿಂದ ಅಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯಕ್ಕೆ ಈ ಬಾರಿ ಬ್ರೇಕ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಳ್ಳೆ ಹುಡುಗ ಪ್ರಥಮ್ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೆರವು