Publish Date: Sun, 15 Mar 2020 (08:54 IST)
Updated Date: Sun, 15 Mar 2020 (08:55 IST)
ಬೆಂಗಳೂರು: ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೊರೋನಾವೈರಸ್ ತಡೆಗೆ ಸೆಲೆಬ್ರಿಟಿಗಳೂ ಜಾಗೃತಿ ಸಂದೇಶಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿದ್ದಾರೆ.
ಇದೀಗ ನಟ ಶ್ರೀಮುರಳಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿರುವ ಶ್ರೀಮುರಳಿ ಆದಷ್ಟು ಶುಚಿತ್ವದ ಕಡೆಗೆ ಗಮನ ಕೊಡಿ. ಕೊರೋನಾ ಬಗ್ಗೆ ಭಯ ಬೇಡ. ಆದರೆ ನಮ್ಮ ಎಚ್ಚರಿಕೆಯಲ್ಲಿರೋಣ ಎಂದು ಸಂದೇಶ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಕೆಲವು ಮಕ್ಕಳನ್ನು ಜತೆಯಲ್ಲಿ ಕೂರಿಸಿಕೊಂಡು ಪ್ರಯೋಗ ಮಾಡಿದ್ದು ಕೈಗಳನ್ನು ಶುಚಿಯಾಗಿಟ್ಟುಕೊಳ್ಳದೇ ಏನಾಗುತ್ತದೆ ಎಂದು ಮಾಡಿ ತೋರಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.