Publish Date: Fri, 13 Mar 2020 (16:02 IST)
Updated Date: Fri, 13 Mar 2020 (16:03 IST)
ಮುಂಬೈ: ದೇಶದಲ್ಲಿ ಕೊರೋನಾವೈರಸ್ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ಐಪಿಎಲ್ ಕ್ರೀಡಾ ಕೂಟವನ್ನು ಏಪ್ರಿಲ್ 15 ರವರೆಗೆ ಮುಂದೂಡಲು ತೀರ್ಮಾನಿಸಲಾಗಿದೆ.
ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಪ್ರೇಕ್ಷಕರು ಮೈದಾನಕ್ಕೆ ಬರುವುದು ಅಪಾಯಕಾರಿ. ಅತ್ತ ಪ್ರೇಕ್ಷಕರಿಲ್ಲದೇ ಐಪಿಎಲ್ ಕೂಟ ನಡೆಸುವುದೂ ಅಸಾಧ‍್ಯ.
ಹೀಗಾಗಿ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ. ಉಳಿದ ವಿಚಾರಗಳ ಬಗ್ಗೆ ಫ‍್ರಾಂಚೈಸಿಗಳ ಬಗ್ಗೆ ನಾಳೆ ನಡೆಯಲಿರುವ ಸಭೆಯಲ್ಲಿ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ.