Publish Date: Fri, 13 Mar 2020 (09:39 IST)
Updated Date: Fri, 13 Mar 2020 (09:40 IST)
ಮುಂಬೈ: ದೇಶದಾದ್ಯಂತ ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ರದ್ದು ಮಾಡಲಾಗಿದೆ.
ಕೊರೋನಾ ಭೀತಿಯಿಂದಾಗಿ ಹಲವು ಟೂರ್ನಮೆಂಟ್ ಗಳು ಅನಿಶ್ಚಿತತೆಯಲ್ಲಿದೆ. ಐಪಿಎಲ್ ಕೂಡಾ ಪ್ರೇಕ್ಷಕರಿಲ್ಲದೇ ನಡೆಯುವ ಸಾಧ‍್ಯತೆಯಿದೆ.
ಇದೀಗ ರಸ್ತೆ ಸುರಕ್ಷತೆಗಾಗಿ ನಡೆಸಲಾಗುತ್ತಿರುವ ರೋಡ್ ಸೇಫ್ಟೀ ಟೂರ್ನಮೆಂಟ್ ನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕೂ ಮೊದಲು ಜನರಿಲ್ಲದೇ ಟೂರ್ನಮೆಂಟ್ ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.