ಮಳೆಯಿಂದಾಗಿ ರದ್ದಾದ ಭಾರತ-ದ.ಆಫ್ರಿಕಾ ಮೊದಲ ಏಕದಿನ

ಗುರುವಾರ, 12 ಮಾರ್ಚ್ 2020 (18:10 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ.


ಧರ್ಮಶಾಲಾ ಮೈದಾನದಲ್ಲಿ ಬೆಳಗಿನಿಂದಲೇ ಮಳೆಯಾಗುತ್ತಿದೆ. ಇದರಿಂದಾಗಿ ಮೈದಾನ ಒಣಗಿಸಲು ಸಿಬ್ಬಂದಿಗಳಿಗೂ ಸಾಧ್ಯವಾಗಲಿಲ್ಲ. ಹೀಗಾಗಿ ಟಾಸ್ ಕೂಡಾ ನಡೆಯಲಿಲ್ಲ.

ಒಂದೆಡೆ ಕೊರೋನಾ ಭೀತಿಯಿದ್ದರೆ, ಇನ್ನೊಂದೆಡೆ ಮಳೆಯ ಕಾಟ. ಇದರಿಂದಾಗಿ ಪ್ರೇಕ್ಷಕರ ಸಂಖ್ಯೆಯೂ ವಿರಳವಾಗಿತ್ತು. ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಮುಂದಿನ ಪಂದ್ಯಗಳಿಗೆ ಪ್ರೇಕ್ಷಕರಿಗೆ ನೋ ಎಂಟ್ರಿ