Select Your Language

Notifications

webdunia
webdunia
webdunia
webdunia

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಮುಂದಿನ ಪಂದ್ಯಗಳಿಗೆ ಪ್ರೇಕ್ಷಕರಿಗೆ ನೋ ಎಂಟ್ರಿ

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಮುಂದಿನ ಪಂದ್ಯಗಳಿಗೆ ಪ್ರೇಕ್ಷಕರಿಗೆ ನೋ ಎಂಟ್ರಿ
ಮುಂಬೈ , ಗುರುವಾರ, 12 ಮಾರ್ಚ್ 2020 (10:25 IST)
ಮುಂಬೈ: ಕೊರೋನಾವೈರಸ್ ಭೀತಿ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಗೂ ತಟ್ಟಿದೆ. ಮಾಜಿ ದಿಗ್ಗಜ ಕ್ರಿಕೆಟಿಗರು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಆಡುತ್ತಿರುವ ಕ್ರಿಕೆಟ್ ಸರಣಿಯ ಮುಂದಿನ ಪಂದ್ಯಗಳು ಖಾಲಿ ಮೈದಾನದಲ್ಲಿ ನಡೆಯಲಿವೆ.


ಕೊರೋನಾ ಭೀತಿಯಿಂದಾಗಿ ಮುಂದಿನ ಪಂದ್ಯಗಳಿಗೆ ಪ್ರೇಕ್ಷಕರಿಗೆ ಮೈದಾನಕ್ಕೆ ಅನುಮತಿ ನಿರಾಕರಿಸಲಾಗಿದೆ. ಮುಂಬೈ ಮತ್ತು ಪುಣೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಸರ್ಕಾರ ಕೂಡಾ ಈಗಾಗಲೇ ಏಪ್ರಿಲ್ 15 ರವರೆಗೆ ಭಾರತಕ್ಕೆ ಬರಲು ವೀಸಾ ಅಮಾನತು ಮಾಡಿದ್ದು, ವಿದೇಶೀ ಆಟಗಾರರು ಭಾರತಕ್ಕೆ ಬರುವುದೂ ಕಷ್ಟವಾಗಲಿದೆ. ಹೀಗಾಗಿ ಕ್ರೀಡಾ ಕೂಟಗಳ ಮೇಲೆ ಕೊರೋನಾ ಛಾಯೆ ಆವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ರದ್ದು ಮಾಡುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳಲಿರುವ ಬಿಸಿಸಿಐ