ಕೊರೋನಾ ಭೀತಿಯಲ್ಲೇ ದ.ಆಫ್ರಿಕಾ-ಟೀಂ ಇಂಡಿಯಾ ಏಕದಿನ ಸರಣಿ ಶುರು

ಗುರುವಾರ, 12 ಮಾರ್ಚ್ 2020 (09:26 IST)
ಧರ್ಮಶಾಲಾ: ದೇಶದಾದ್ಯಂತ ಕೊರೋನಾವೈರಸ್ ಭೀತಿ ಮನೆ ಮಾಡಿದ್ದರೆ, ಇದರ ನಡುವೆಯೂ ಇಂದಿನಿಂದ ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ಸರಣಿ ಆರಂಭವಾಗುತ್ತಿದೆ.


ಮೊದಲ ಪಂದ್ಯ ಧರ್ಮಶಾಲಾದ ಮೈದಾನದಲ್ಲಿ ನಡೆಯಲಿದ್ದು, ನ್ಯೂಜಿಲೆಂಡ್ ಸರಣಿಯ ಕಹಿ ಮರೆತು ಭಾರತ ತವರಿನ ಸರಣಿಗೆ ಸಜ್ಜಾಗಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದ ಹೊರಬರಲು ಇದು ಉತ್ತಮ ವೇದಿಕೆಯಾಗಲಿದೆ.

ಐಪಿಎಲ್ ಗೆ ಮೊದಲು ಟೀಂ ಇಂಡಿಯಾ ಆಡಲಿರುವ ಕೊನೆಯ ಸರಣಿ ಇದಾಗಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಿದ್ದರೂ ಕೆಎಲ್ ರಾಹುಲ್, ಶಿಖರ್ ಧವನ್ ಜೋಡಿ ಆರಂಭಿಕ ಸ್ಥಾನವನ್ನು ತುಂಬಲಿದ್ದಾರೆ. ತವರಿನ ಬಲವಿರುವುದರಿಂದ ಮೇಲ್ನೋಟಕ್ಕೆ ಟೀಂ ಇಂಡಿಯಾವೇ ಫೆವರಿಟ್ ಆಗಿದೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ಗಮನ ಸೆಳೆದ ಕೊರೋನಾ ವೈರಸ್ ಬ್ಯಾನರ್