Publish Date: Thu, 12 Mar 2020 (09:33 IST)
Updated Date: Thu, 12 Mar 2020 (09:36 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ವಿಶ್ವದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ.
ಇನ್ನು, 133 ರನ್ ಬಾರಿಸಿದರೆ ವಿರಾಟ್ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 12 ಸಾವಿರ ಗಡಿ ದಾಟಿದ ಕೀರ್ತಿಗೆ ಭಾಜನರಾಗಲಿದ್ದಾರೆ. ಇದಕ್ಕೂ ಮೊದಲು ಸಚಿನ್ ಹೆಸರಿನಲ್ಲಿ ಈ ದಾಖಲೆಯಿದೆ. ಸಚಿನ್ 300 ಇನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದರು.
ವಿರಾಟ್ ಈಗ 239 ಇನಿಂಗ್ಸ್ ಆಡಿದ್ದು, ಈ ದಾಖಲೆ ಮುರಿಯುವ ಎಲ್ಲಾ ಅವಕಾಶ ಹೊಂದಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಿಂದ ಅವರು ಈ ದಾಖಲೆ ಮಾಡಬಹುದು ಎಂಬ ನಿರೀಕ್ಷೆಯಿದೆ.