Publish Date: Fri, 13 Mar 2020 (09:07 IST)
Updated Date: Fri, 13 Mar 2020 (09:08 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಇಂದಿನ ಪಂದ್ಯ ದ.ಆಫ್ರಿಕಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವೆ ನಡೆಯಲಿದೆ.
ನಿನ್ನೆ ಬಿಡುವಿನ ದಿನವಾಗಿತ್ತು. ಇಂದು ಮತ್ತೆ ಪಂದ್ಯವಿದ್ದು, ಕೊರೋನಾ ಭೀತಿಯಿಂದಾಗಿ ಪ್ರೇಕ್ಷಕರ ಸಂಖ್ಯೆ ವಿರಳವಾಗಿರಲಿದೆ. ಹೆಚ್ಚು ಕಡಿಮೆ ಖಾಲಿ ಮೈದಾನದಲ್ಲಿ ಪಂದ್ಯ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ.
ಈವರೆಗೆ ತಲಾ ಒಂದೊಂದು ಗೆಲುವು ಕಂಡಿರುವ ದ.ಆಫ್ರಿಕಾ ಮತ್ತು ಲಂಕಾ ನಡುವೆ ಇಂದು ಸಮಬಲದ ಹೋರಾಟ ನಡೆಯುವ ನಿರೀಕ್ಷೆಯಿದೆ.