Publish Date: Fri, 13 Mar 2020 (09:17 IST)
Updated Date: Fri, 13 Mar 2020 (09:18 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಲು ಅಭ್ಯಾಸ ನಡೆಸುತ್ತಿರುವ ಸುರೇಶ್ ರೈನಾ ಅಕಸ್ಮತ್ತಾಗಿ ನಾಯಕ ಧೋನಿ ಬ್ಯಾಟ್ ತುಳಿದ ಬಳಿಕ ಮಾಡಿದ ಕೆಲಸ ನೋಡಿ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.
ಧೋನಿ ತಮ್ಮ ಅಚ್ಚು ಮೆಚ್ಚಿನ ನಾಯಕ ಎಂದು ಆಗಾಗ ಹೇಳುವ ರೈನಾ ಅದನ್ನು ತಮ್ಮ ನಡತೆಯಲ್ಲೂ ತೋರಿಸಿಕೊಟ್ಟಿದ್ದಾರೆ. ಅಭ್ಯಾಸದ ವೇಳೆ ಅಕಸ್ಮತ್ತಾಗಿ ರೈನಾ ಧೋನಿ ಬ್ಯಾಟ್ ಮೇಲೆ ಕಾಲಿಟ್ಟಿದ್ದಾರೆ.
ತನ್ನ ತಪ್ಪು ಅರಿವಾದ ತಕ್ಷಣ ರೈನಾ ಬ್ಯಾಟ್ ಎತ್ತಿಕೊಂಡು ಅದನ್ನು ಹಣೆಯ ಮೇಲಿಟ್ಟು ನಮಸ್ಕರಿಸಿದ್ದಾರೆ. ಇದಲ್ಲವೇ ಗುರು ಭಕ್ತಿಯೆಂದರೆ? ರೈನಾರ ಈ ನಡುವಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.