Publish Date: Wed, 11 Mar 2020 (09:56 IST)
Updated Date: Wed, 11 Mar 2020 (09:57 IST)
ಬೆಂಗಳೂರು: ದೇಶದಾದ್ಯಂತ ಕೊರೋನಾವೈರಸ್ ಭೀತಿಯಿರುವುದರಿಂದ ಈ ಬಾರಿಯ ಐಪಿಎಲ್ ರದ್ದುಗೊಳಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಈಗಾಗಲೇ ಮಹಾರಾಷ್ಟ್ರ ಈ ಸಂಬಂಧಕ್ಕೆ ಕೇಂದ್ರಕ್ಕೆ ಮನವಿ ಮಾಡಿತ್ತು. ಇದೀಗ ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಗಳು ನಡೆಯಲಿರುವುದರಿಂದ ಸಚಿವ ಸುಧಾಕರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಜನ ಗುಂಪು ಸೇರುವುದರಿಂದ ಕೊರನಾ ಹರಡುವ ಭೀತಿ ಹೆಚ್ಚಿದೆ. ಹೀಗಾಗಿ ಇಂತಹ ಕ್ರೀಡಾ ಕೂಟಗಳನ್ನು ರದ್ದುಗೊಳಿಸಲು ಸಚಿವರು ಮನವಿ ಮಾಡಿದ್ದಾರೆ.