Publish Date: Sat, 14 Mar 2020 (09:08 IST)
Updated Date: Sat, 14 Mar 2020 (09:17 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಸಂಬಂಧಿಕರು ಎನ್ನುವುದು ಎಲ್ಲರಿಗೂ ಗೊತ್ತು. ಇಂತಿಪ್ಪ ಶಿವಣ್ಣ, ಶ್ರೀಮುರಳಿ ಕೈಯಲ್ಲಿ ತುತ್ತು ತಿನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದಾ ಲವಲವಿಕೆಯಿಂದಿರುವ ಶಿವಣ್ಣ ಫ್ಯಾಮಿಲಿ ಕಾರ್ಯಕ್ರಮವೊಂದರಲ್ಲಿ ಶ್ರೀಮುರಳಿ ಮಸಾಲೆ ದೋಸೆ ಸವಿಯುತ್ತಿದ್ದರೆ ಪಕ್ಕದಲ್ಲೇ ಬಂದು ಕೂತು ಅವರ ಕೈಯಿಂದ ಕೈ ತುತ್ತು ಕೇಳಿ ಪಡೆಯುತ್ತಾರೆ.
ಈ ವಿಡಿಯೋ ನೋಡಿ ನಮ್ಮ ಶಿವಣ್ಣ ಎಷ್ಟು ಸಿಂಪಲ್ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಯಾರೊಂದಿಗೇ ಆಗಲಿ ಸುಲಭವಾಗಿ ಬೆರೆಯುವ ಶಿವಣ್ಣರ ಸ್ನೇಹಪರ ನಡುವಳಿಕೆಯೇ ಅಂತಹದ್ದು!